ಸಿಕ್ಕಿಂ ಮಾಜಿ ಮುಖ್ಯಮಂತ್ರಿ ನರ್ ಬಹಾದುರ್ ಭಂಡಾರಿ ವಿಧಿವಶ

ಸಿಕ್ಕಿಂ ಮಾಜಿ ಮುಖ್ಯಮಂತ್ರಿ ನರ್ ಬಹಾದುರ್ ಭಂಡಾರಿ (76) ಭಾನುವಾರ ನವದೆಹಲಿಯಲ್ಲಿ ವಿಧಿವಶರಾಗಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಸಿಕ್ಕಿಂ ಸಂಗ್ರಾಮ್ ಪರಿಷತ್‌ನ ಸಂಸ್ಥಾಪಕರಾಗಿದ್ದರು. 1979ರಿಂದ 1994ರವರೆಗೆ ಅವರು ಅಧಿಕಾರ ವಹಿಸಿದ್ದರು.

ಸಿಕ್ಕಿಂ ಹಾಲಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್‌ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಸೇರಿದಂತೆ ಹಲವರು ಗಣ್ಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.