ಗುಜರಾತ ಚುನಾವಣೆಗೆ ವಿವಿಪಿಎಟಿ: ಆಯೋಗ

ಪೇಪರ್ ಟ್ರೈಲ್ ಗಳನ್ನು ಬಳಸಿಕೊಂಡ ಇವಿಎಂಗಳ (ವಿವಿಪಿಎಟಿ) ಮೂಲಕ ಮುಂಬರುವ ಗುಜರಾತ್ ಚುನಾವಣೆಯನ್ನು ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧವಾಗಿದೆ ಎಂದು ಆಯೋಗ ಸುಪ್ರೀಂಕೋರ್ಟ್ ತಿಳಿಸಿದೆ. 
 
ಇದನ್ನು ಒಪ್ಪಿಕೊಂಡಿರುವ ಸುಪ್ರಿಂಕೋರ್ಟ್ ವಿವಿಪಿಎಟಿ ಬಳಕೆಗೆ ನಿರ್ದೇಶನ ನೀಡಬೇಕೆಂಬ ಅರ್ಜಿಯನ್ನು ಇತ್ಯರ್ಥಪಡಿಸಿದೆ. ವಿವಿಪಿಎಟಿ ಮೆಷಿನ್ ಗಳು ಇವಿಎಂಗಳ ಜತೆ ಸಂಪರ್ಕ ಹೊಂದಿರುವ ಜತೆಗೆ ಮತದಾನ ಮಾಡಿದ ವ್ಯಕ್ತಿಗೆ ಮತದಾನ ಮಾಡಿದ ಬಗ್ಗೆ ಕಾಗದ ಪತ್ರವೊಂದನ್ನು ನೀಡುತ್ತದೆ. ಇದರಿಂದಾಗಿ ತಾವು ಸರಿಯಾಗಿ ಮತದಾನ ಮಾಡಿದ್ದೇವೆ ಎಂಬ ಖಾತರಿಯೂ ಮತದಾರರಿಗೆ ಸಿಗಲಿದೆ.