ಜಮ್ಮು ಕಾಶ್ಮೀರ: ಎನ್ ಕೌಂಟರ್ ನಲ್ಲಿ ಮೂವರು ಉಗ್ರರ ಹತ್ಯೆ

ಜಮ್ಮು ಕಾಶ್ಮೀರದಲ್ಲಿ ಮೂವರು ಅಪರಿಚಿತ ಉಗ್ರಗಾಮಿಗಳನ್ನು ಭಾರತೀಯ ಸೇನಾ ಪಡೆ ಹತ್ಯೆ ಮಾಡಿದೆ. ಪುಲ್ವಾಮಾ ಜಿಲ್ಲೆಯ ತ್ರಾಲ್ ಸಬ್ ಡಿವಿಷನ್ ನ ಗುಲಾಬ್ ಭಾಗ್ ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗೆ ಎನ್ ಕೌಂಟರ್ ವೇಳೆ ಈ ಹತ್ಯೆ ಘಟನೆ ನಡೆದಿದೆ.  
 
ಭದ್ರತಾ ಪಡೆಗಳ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರೀ ಗುಂಡಿನ ಕಾಳಗ ಏರ್ಪಟ್ಟಿದೆ. ಈ ಉಗ್ರಗಾಮಿಗಳು ಯಾವ ದೇಶಕ್ಕೆ ಸೇರಿಸವರು ಮತ್ತು ಅವರ ಗುರುತಿನ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.