ಸೇನಾ ಜವಾನನ ಹತ್ಯೆ: ಪಾಕ್ ಅಧಿಕಾರಿಗೆ ಸಮನ್ಸ್

ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ಪಡೆ ಮೇಲೆ ಅಪ್ರಚೋದಿತ ದಾಳಿ ನಡೆಸಿ ಸೇನಾ ಜವಾನನೊಬ್ಬನ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯ ಉನ್ನತಾಧಿಕಾರಿಗೆ ಕೇಂದ್ರ ಸರ್ಕಾರ ಸಮನ್ ಜಾರಿ ಮಾಡಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ತಿಳಿಸಿದೆ.  
ನವದೆಹಲಿಯಲ್ಲಿ ಪಾಕ್ ನ ರಾಯಭಾರಿ ತಾರಿಖ್ ಕರೀಮ್ ಅವರನ್ನು ಕರೆಸಿದ ಕೇಂದ್ರ ಸ್ಪಷ್ಟನೆ ಕೇಳಿತು. ಈ ಕೃತ್ಯವನ್ನು ಖಂಡಿಸಿರುವ ಕೇಂದ್ರ ವಿದೇಶಾಂಗ ಇಲಾಖೆ, ಜೀವಹಾನಿ ಮಾಡುವಂತಹ ಪಾಕಿಸ್ತಾನದ ಕುಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ.