ಅಮೆರಿಕ, ಭಾರತದ ಮಧ್ಯೆ ಸಹಕಾರ ವೃದ್ಧಿ: ಪೆಂಟಗಾನ್‌

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕದ ಪಾಲುದಾರಿಕೆಯು ಗಮನಾರ್ಹವಾಗಿ ಉತ್ತಮಗೊಂಡಿದೆ ಎಂದು ಅಮೆರಿಕದ ರಕ್ಷಣಾ ವಿಭಾಗ ಪೆಂಟಗಾನ್‌ನ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಎರಡೂ ದೇಶದ ರಾಜಕೀಯ ಹಿತಾಸಕ್ತಿ ಇದಕ್ಕೆ ಪ್ರಮುಖವಾಗಿದೆ ಎಂದು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಕ್ಷಣಾ ಉಪಸಹಾಯಕ ಕಾರ್ಯದರ್ಶಿ ಜೋಸೆಫ್‌ ಫೆಲ್ಟರ್ ಹೇಳಿದ್ದಾರೆ.

ವಿವಿಧ ರಾಜಕೀಯ, ಆರ್ಥಿಕ ಮತ್ತು ಭದ್ರತಾ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನೈಸರ್ಗಿಕ ಪಾಲುದಾರನಾಗಿದೆ. ಜಾಗತಿಕ ಸ್ಥಿರತೆಗೆ ಪರಸ್ಪರ ಸಹಕಾರದೊಂದಿಗೆ ಪೈರಸಿ ತಡೆ, ಭಯೋತ್ಪಾದನೆ ತಡೆ, ಮಾನವೀಯ ನೆರವು ಮತ್ತು ಸಹಕಾರದಲ್ಲಿ ಉಭಯ ದೇಶಗಳು ಮಹತ್ವದ ಸಹಕಾರ ಸಾಧಿಸಿವೆ ಎಂದು ಅವರು ಹೇಳಿದ್ದಾರೆ.