ಕಾಠ್ಮಂಡುವಿನಲ್ಲಿ 15ನೇ ಬಿಮ್‌ಸ್ಟೆಕ್ ಸಚಿವಾಲಯ ಸಭೆ

ಭಯೋತ್ಪಾದನೆಯು ಶಾಂತಿ, ಪ್ರಜಾಪ್ರಭುತ್ವ, ಅಭಿವೃದ್ಧಿ ಮತ್ತು ಉತ್ತಮ ನೆರೆಹೊರೆಗೆ ಅತ್ಯಂತ ದೊಡ್ಡ ಭೀತಿಯಾಗಿದೆ ಎಂದು ನೇಪಾಳ ಪ್ರಧಾನಿ ಶೇರ್ ಬಹಾದುರ್ ದೇವುಬಾ ಹೇಳಿದ್ದಾರೆ. ಕಾಠ್ಮಂಡುವಿನಲ್ಲಿ 15ನೇ ಬಿಮ್‌ಸ್ಟೆಕ್‌ ಸಚಿವರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೇಪಾಳವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ. ಬಿಮ್‌ಸ್ಟೆಕ್ ಪ್ರದೇಶವು ವಿಶಾಲವಾದ ನೈಸರ್ಗಿಕ ಸಂಪನ್ಮೂಲಗಳನ್ನು ಒಳಗೊಂಡಿದೆ. ಇವುಗಳನ್ನು ನಾವು ಸರಿಯಾಗಿ ಬಳಸಿಕೊಂಡರೆ ನಮ್ಮ ಜನರಿಗೆ ಸಾಕಷ್ಟು ಅನುಕೂಲವನ್ನು ಕಲ್ಪಿಸಿಕೊಡಬಹುದಾಗಿದೆ ಎಂದರು.

ಎರಡು ದಿನದ ಸಭೆಯಲ್ಲಿ, ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಭಾಗವಹಿಸಲಿದ್ದು, ಸಹಕಾರದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಭಾಗವಹಿಸುತ್ತಿದ್ದಾರೆ.