ಆರ್ಥಿಕ ಸಮೀಕ್ಷೆ ಸಂಪುಟ || ಈ ವಿತ್ತ ವರ್ಷದಲ್ಲಿ ಶೇ. 7.5 ಗುರಿ ತಲುಪುವುದು ಕಠಿಣ

ಸಂಸತ್ತಿನಲ್ಲಿ ಶುಕ್ರವಾರ 2016-17ರ ಸಾಲಿನ ಆರ್ಥಿಕ ಸಮೀಕ್ಷೆ ಸಂಪುಟ || ಬಿಡುಗಡೆ ಗೊಂಡಿದ್ದು ಶೇ. 6.75- 7.5 ರಷ್ಟು ಪ್ರಗತಿಯ ಗುರಿಯನ್ನು ಈ ವರ್ಷ ತಲುಪುವುದು ಕಷ್ಟ ಎಂದು ಹೇಳಿದೆ.

ಜಿಎಸ್ಟಿ ಸೇರಿದಂತೆ ಸರ್ಕಾರದ ಅನೇಕ ಕ್ರಮಗಳಿಂದ ಭಾರತದ ಅರ್ಥ ವ್ಯವಸ್ಥೆಯ ಸಂರಚನೆಯಲ್ಲಿ ಬದಲಾವಣೆ ಆಗಿರುವುದನ್ನು ಸಮೀಕ್ಷೆ ಕಂಡುಕೊಂಡಿದೆ. ಅಪನಗದೀಕರಣದ ಧನಾತ್ಮಕ ಪರಿಣಾಮ, ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲು ತಾತ್ವಿಕವಾಗಿ ಒಪ್ಪಿಗೆ, ಇಂಧನ ಸಬ್ಸಿಡಿಯಲ್ಲಿ ಸುಧಾರಣೆ ಮುಂತಾದವು ಉತ್ತಮ ಪರಿಣಾಮ ಮಾಡಿದೆ.