ಉತ್ತರ ಕೊರಿಯಾಕ್ಕೆ ಕಠಿಣ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ: ಚೀನಾದಿಂದ ಸಂಯಮಕ್ಕೆ ಕರೆ

ಉತ್ತರ ಕೊರಿಯಾವು ಸರಿಯಾಗಿ ವರ್ತಿಸದೆ ಹೋದರೆ ಅಮೆರಿಕದ ಮಿಲಿಟರಿ ಪರಿಹಾರವು ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ನೆಲದ ಮೇಲೆ ದಾಳಿ ನಡೆಸುವ ಯೋಚನೆಯನ್ನು ಉತ್ತರ ಕೊರಿಯಾ ಹೊಂದಿದ್ದರೆ ಅದಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಟ್ರಂಪ್ ಗುಡುಗಿದ್ದಾರೆ.

ಇದೇ ವೇಳೆ, ಯುಎಸ್ ಮತ್ತು ಉತ್ತರ ಕೊರಿಯಾ ಸಂಯಮ ಕಾಪಾಡಬೇಕು ಎಂದು ಚೀನಾ ಕರೆ ನೀಡಿದೆ.