ಕೀನ್ಯಾದ ಅಧ್ಯಕ್ಷರಾಗಿ ಉಹ್ರು ಕೆನ್ಯಟ್ಟಾ ಮರು ಆಯ್ಕೆ

ಕೀನ್ಯಾದ ಹೊಸ ಅಧ್ಯಕ್ಷರಾಗಿ ಉಹ್ರು ಕೆನ್ಯಟ್ಟಾ ಮರು ಆಯ್ಕೆ ಆಗಿದ್ದಾರೆ. ಗುರುವಾರ ಮತದಾನ ನಡೆದಿತ್ತು. ಚುನಾವಣಾ ಆಯೋಗದ ಮುಖ್ಯಸ್ಥ ವಫುಲಾ ಚೆಬುಕಟ್ಟಿ ಅವರು ಕೆನ್ಯಟ್ಟಾ ಶೇ. 54.27 ಮತ ಪಡೆದು ರಾಫಿಯಾ ಒಡಿಂಗಾ ಅವರನ್ನು ಮಣಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ. ಒಡಿಂಗಾ ಶೇ. 44.74 ಮತ ಪಡೆದಿದ್ದಾರೆ.

ಗೆಲುವಿನ ಘೋಷಣೆಯ ಬಳಿಕ ಕೆನ್ಯಟ್ಟಾ, ಒಗ್ಗಟ್ಟಿಗೆ ಕರೆ ನೀಡಿದ್ದು, ನಾವೆಲ್ಲರು ಒಂದೇ ಮತ್ತು ಶತ್ರುಗಳಲ್ಲ ಎಂದು ವಿರೋಧ ಪಕ್ಷದ ಬೆಂಬಲಿಗರಿಗೆ ಹೇಳಿದ್ದಾರೆ. ಚುನಾವಣಾ ಫಲಿತಾಂಶ ಘೋಷಣೆ ಆಗುವ ಮೊದಲೇ ವಿರೋಧ ಪಕ್ಷ ಫಲಿತಾಂಶವನ್ನು ತಿರಸ್ಕರಿಸಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ಆದರೆ ಕೆನ್ಯಟ್ಟಾ, ಮುಕ್ತ, ನ್ಯಾಯಸಮ್ಮತ ಮತ್ತು ವಿಶ್ವಾಸರ್ಹವಾಗಿ ಚುನಾವಣೆ ನಡೆದಿದೆ ಎಂದು ಹೇಳಿದ್ದಾರೆ.