ಜೂನ್ ನ ಐಐಪಿಯಲ್ಲಿ ಶೇ. 0.1ರ ಕುಸಿತ

ದೇಶದ ಕೈಗಾರಿಕಾ ಔಟ್ ಪುಟ್ ನಲ್ಲಿ ಜೂನ್ ತಿಂಗಳಿನಲ್ಲಿ ಶೇ. 0.1ರ ಕುಸಿತ ದಾಖಲಾಗಿದೆ. ಉತ್ಪಾದನಾ ಮತ್ತು ಕ್ಯಾಪಿಟಲ್ ಗೂಡ್ಸ್ ವಲಯದಲ್ಲಿ ಕುಸಿತವಾಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಕೇಂದ್ರ ಅಂಕಿ ಅಂಶಗಳ ಕಚೇರಿಯು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಜೂನ್ ನಲ್ಲಿ ಉತ್ಪಾದನಾ ವಲಯವು ಶೇ. 0.4 ಕುಸಿತ ಕಂಡಿದೆ. ಆದರೆ ಗಣಿ ಉತ್ಪಾದನೆ ಶೇ. 0.4 ಏರಿಕೆ ಮತ್ತು ವಿದ್ಯುತ್ ಉತ್ಪಾದನೆ ಶೇ. 2.1ರಷ್ಟು ಏರಿಕೆ ಕಂಡಿದೆ.