ಜೋರ್ಡನ್ ಗಡಿಯಲ್ಲಿ ಸಿರಿಯಾದ ಆತ್ಮಾಹುತಿ ದಾಳಿಗೆ 23 ಬಲಿ

ಜೋರ್ಡನ್ ನ ಗಡಿಯಲ್ಲಿರುವ ದಕ್ಷಿಣ ಸಿರಿಯಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ ಪಕ್ಷ 23 ಜನ ಸತ್ತಿದ್ದು ಡಜನ್ ಗಿಂತಲೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಸಿರಿಯನ್ ಅಬ್ಸರ್ವೆಟರಿ ಫಾರ್ ಹುಮನ್ ರೈಟ್ಸ್, ನಾಸೀಬ್ ಗಡಿ ದಾಟುವಿಕೆ ಬಳಿ ಜೈಷ್ ಅಲ್ – ಇಸ್ಲಾಂ ನೆಲೆಯ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ 23 ಮಂದಿ ಸತ್ತಿದ್ದಾರೆ. ಸತ್ತ ಹೆಚ್ಚಿನವರಲ್ಲಿ ಜೈಷ್ ಅಲ್ –ಇಸ್ಲಾಂ ನವರೇ ಹೆಚ್ಚು ಎಂದು ಹೇಳಿದೆ.