ತನ್ನ ಹೊಸ ಮುಖ್ಯಸ್ಥ ವೇಂಕಯ್ಯ ನಾಯ್ಡು ಅವರನ್ನು ಸ್ವಾಗತಿಸಿದ ರಾಜ್ಯ ಸಭಾ

ರಾಜ್ಯ ಸಭಾ ತನ್ನ ಹೊಸ ಮುಖ್ಯಸ್ಥ ಎಂ ವೇಂಕಯ್ಯ ನಾಯ್ಡು ಅವರನ್ನು ನಿನ್ನೆ ಸ್ವಾಗತಿಸಿದೆ. ಅವರು ನಿನ್ನೆ ಅಧಿಕಾರ ಸ್ವೀಕಾರ ಮಾಡಿದರು. ಇವರನ್ನು ಅಭಿನಂದಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ., ನಾಯ್ಡು ಅವರು ತಳ ಮಟ್ಟದಿಂದ ಬೆಳೆದು ಭಾರತೀಯ ರಾಜಕಾರಣದಲ್ಲಿ ಉನ್ನತ ಮಟ್ಟಕ್ಕೆ ಏರಿದವರು. ರೈತರ ಕುಟುಂಬದಿಂದ ಬಂದ ನಾಯ್ಡು ಅವರು ತಮ್ಮ ರಾಜಕೀಯ ಜೀವನದ ದೀರ್ಘಾವಧಿಯ ಅನುಭವದಿಂದ ಸಭಾಪತಿ  ಸ್ಥಾನವನ್ನು ಯಶಸ್ವಿಯಾಗಿ  ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯ ರೂವಾರಿ ವೆಂಕಯ್ಯ ನಾಯ್ಡು ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ಗುಲಾಂ ನಬಿ ಅಜಾದ್ ಅವರು ರಾಜ್ಯ ಸಭೆಯ ಸಭಾಪತಿ ಆಗಿರುವುದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂದ ಗೆಲುವು. ಅವರು ವಿದ್ಯಾರ್ಥಿ ಜೀವನದಿಂದಲೇ ಸಾರ್ವಜನಿಕ ಜೀವನದಲ್ಲಿ ಸಕ್ರೀಯರಾಗಿದ್ದರು ಎಂದು ಮೆಚ್ಚಿಕೊಂಡರು. ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಅವರೂ ನಾಯ್ಡು ಅವರನ್ನು ಪ್ರಶಂಸಿದರು.