ಭಾರತದ ಪುರುಷರ ಕಂಪೌಂಡ್ ತಂಡವು ಕಂಚಿನ ಪದಕದ ಸುತ್ತಿಗೆ

ಬರ್ಲಿನ್ ನಲ್ಲಿ ನಡೆಯುತ್ತಿರುವ ವಿಶ್ವ ಕಪ್ ಸ್ಟೇಜ್ 4 ರ ಕಂಚಿನ ಪದಕದ ಪೈಪೋಟಿಯಲ್ಲಿ ಭಾರತೀಯ ಪುರುಷರ ಕಂಪೌಂಡ್ ಟೀಮ್ ಉಳಿದಿದೆ. ಇಂದು ಭಾರತವು ಕಂಚಿನ ಪದಕಕ್ಕಾಗಿ ತನಗಿಂತ ಕೆಳಗಿನ ಕ್ರಮಾಂಕದ ಜರ್ಮನಿಯ ಸವಾಲನ್ನು ಎದುರಿಸಲಿದೆ.

5ನೇ ಕ್ರಮಾಂಕದ ಭಾರತೀಯ ಜೋಡಿ ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ಅಮನ್ ಜೀತ್ ಸಿಂಗ್ ತಮ್ಮ ಅಭಿಯಾನವನ್ನು ಸ್ಪೇನ್ 228-222 ನ್ನು ಮಣಿಸಿ ಆ ಬಳಿಕ ಕ್ವಾರ್ಟರ್ ಫೈನಲ್ ನಲ್ಲಿ ಸ್ವೀಡನ್ ತಂಡವನ್ನು 231-221 ಅಂತರದಿಂದ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದೆ.

ಆದರೆ ಆಗ್ರ ಕ್ರಮಾಂಕದ ಯುಎಸ್ ಜೋಡಿಯ ಸವಾಲನ್ನು ದಿಟ್ಟವಾಗಿ ಎದುರಿಸಿದರೂ ಗೆಲುವ  ಸಾಧ್ಯವಾಗದೆ ಸೆಮಿ ಫೈನಲ್ ನಲ್ಲಿ 228-233 ಅಂತರದಿಂದ ಭಾರತೀಯ ತಂಡ ಸೋತಿತ್ತು.

ಮಹಿಳೆಯರ ವಿಭಾಗದಲ್ಲಿ ಮೂರನೇ ಕ್ರಮಾಂಕದ ಭಾರತೀಯ ಜೋಡಿ ಜ್ಯೋತಿ ಸುರೇಖಾ, ತ್ರಿಶಾ ದೆಬ್ ಮತ್ತು ಸ್ನೆಹಲ್ ಮಂಧಾರೆ ಬೈ ಪಡೆದು ಕ್ವಾರ್ಟರ್ ಫೈನಲ್ ತಲುಪಿದರೂ ಅಲ್ಲಿ 11ನೇ ಕ್ರಮಾಂಕದ ದಕ್ಷಿಣ ಆಫ್ರಿಕಾದ ಎದುರು 28-29 ಅಂತರದಿಂದ ಕೂದಲೆಳೆಯಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದೆ.

ಮಿಕ್ಸಡ್ ಜೋಡಿಯಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ಜೋಡಿ ಮೆಕ್ಸಿಕೋದ ಎದುರು 149-156 ಅಂಕಗಳಿಂದ ಸೋತಿತ್ತು. ಸಿಂಗಲ್ಸ್ ನಲ್ಲಿ ವರ್ಮಾ ಮತ್ತು ಜ್ಯೋತಿ ಮಾತ್ರ ಕೊನೆಯ 8 ಜನರ ಸುತ್ತು ಪ್ರವೇಶಿಸಿದ್ದಾರೆ.