ಭಾರತ-ಶ್ರೀಲಂಕಾ ನಡುವಿನ ಕೊನೆಯ ಟೆಸ್ಟ್ ಇಂದಿನಿಂದ ಪ್ರಾರಂಭ

ಮೂರನೇ ಮತ್ತು ಅಂತಿಮ ಟೆಸ್ಟ್ ಭಾರತ ಮತ್ತು ಶ್ರೀಲಂಕಾದ ಮಧ್ಯೆ ಇಂದು ಕ್ಯಾಂಡಿಯಲ್ಲಿ ಆರಂಭಗೊಳ್ಳಲಿದೆ

ಭಾರತವು ಈಗಾಗಲೇ 2-0 ಅಂತರದಿಂದ ಟೆಸ್ಟ್ ಸರಣಿ ಜಯಿಸಿದೆ. ಭಾರತವು ಹಿರಿಯ ಅಲ್ ರೌಂಡರ್ ರವೀಂದ್ರ ಜಡೇಜಾ ಅವರ ಸೇವೆಯಿಂದ ವಂಚಿತವಾಗಿದೆ. ಆಶಿಸ್ತಿನ ನಡೆಗಾಗಿ ಜಡೇಜಾ ಅವರಿಗೆ ಐಸಿಸಿ ಒಂದು ಪಂದ್ಯದ ನಿಷೇಧ ಹೇರಿತ್ತು. ಜಡೇಜಾ ಅವರ ಬದಲಿಗೆ ಕುಲ್ ದೀಪ್ ಯಾದವ್ ಟೆಸ್ಟ್ ಆಡುವ ಸಾಧ್ಯತೆಯಿದೆ.

ಹಿರಿಯ ಸ್ಪಿನ್ನರ್ ರಂಗನ್ ಹೇರಾತ್, ವೇಗಿ ನುವಾನ್ ಪ್ರದೀಪ್ ಮತ್ತು ಅಲ್ ರೌಂಡರ್ ಅಸೆಲಾ ಗುಣರತ್ನೆ ಅವರು ಗಾಯದಿಂದಾಗಿ ಶ್ರೀಲಂಕಾ ತಂಡದ ಆಡುವ ಬಳಗದಲ್ಲಿ ಕಾಣಿಸಲಾರರು. ಅವರ ಬದಲಿಗೆ ವೇಗದ ಬೌಲರ್ ಗಳಾದ ದುಷ್ಮಾಂತ ಚಾಮೀರ ಮತ್ತು ಲಹೀರು ಗಾಮಗೆ ಶ್ರೀಲಂಕಾ ತಂಡ ಪ್ರವೇಶಿಸಿದ್ದಾರೆ.