ಭೂತನ್ ನ ವಿದೇಶ ಸಚಿವರನ್ನು ಭೇಟಿಯಾದ ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಭೂತಾನ್ ನ ವಿದೇಶಾಂಗ ಸಚಿವ ಡಾಮ್ಚೀ ಡೋರ್ಜಿ ಅವರನ್ನು ಕಾಠ್ಮಂಡುವಿನಲ್ಲಿ ಬಿಮ್ಸ್ ಟೆಕ್ ಸಭೆಯ ನೇಪಥ್ಯದಲ್ಲಿ ನಿನ್ನೆ ಭೇಟಿ ಆಗಿದ್ದಾರೆ. ಆದರೆ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಲಾಗಿಲ್ಲ.

ಭಾರತ, ಚೀನಾ, ಭೂತನ್ ಗಡಿ ಸೇರುವ ಡೊಕ್ಲಾಂನಲ್ಲಿ ವಿವಾದ ಇರುವ ಸಂದರ್ಭದಲ್ಲಿ ಈ ಮಾತುಕತೆ ನಡೆದಿರುವುದು ಮಹತ್ವ ಪಡೆದಿದೆ. ಬಾಂಗ್ಲಾದೇಶ, ಭಾರತ, ಮಯಾನ್ಮಾರ್, ಶ್ರೀಲಂಕಾ, ಭೂತಾನ್ ಮತ್ತ ನೇಪಾಳಗಳು ಬಿಮ್ಸ್ ಟೆಕ್ ಸಭೆಯಲ್ಲಿ ಭಾಗಿಯಾಗಿದ್ದವು.