ಮಾನ್ಸೂನ್ ಅಧಿವೇಶನ ಮುಕ್ತಾಯ; ಸಂಸತ್ತಿನ ಉಭಯ ಮನೆಗಳ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಮಾನ್ಸೂನ್ ಅಧಿವೇಶನ ಮುಕ್ತಾಯಗೊಂಡಿದ್ದು ರಾಜ್ಯ ಸಭೆ ಮತ್ತು ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅಧಿವೇಶನವನ್ನು ಮುಂದೂಡುವ ಸಂದರ್ಭದಲ್ಲಿ 19 ದಿನ ಕಲಾಪ ಸೇರಿದ್ದು 71 ಗಂಟೆ ಚರ್ಚೆ ನಡೆದಿದೆ. ನಿಧಿಗಾಗಿನ ಪೂರಕ ಬೇಡಿಕೆ ಮತ್ತು ಹೆಚ್ಚಿನ ನಿಧಿಗಾಗಿನ ಬೇಡಿಕೆಗಳಿಗೆ ಅಂಗೀಕರಾ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಅಧಿವೇಶನದ ಸಂದರ್ಭದಲ್ಲಿ 17 ಮಸೂದೆಗಳನ್ನು ಮಂಡಿಸಲಾಗಿದ್ದು 14 ಮಸೂದೆಗಳು ಅಂಗೀಕಾರಗೊಂಡಿವೆ. 30 ಗಂಟೆಗಳಷ್ಟು ಸಮಯ ಗಲಾಟೆಯಿಂದಾಗಿ ನಷ್ಟವಾಗಿದೆ. ಆದರೂ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲು 10 ಗಂಟೆ ಹೆಚ್ಚುವರಿ ಕಲಾಪ ನಡೆಸಲಾಗಿದೆ ಎಂದು ಹೇಳಿದರು.

ಪ್ರಶ್ನೆ ಸಮಯದ ಬಳಿಕ, ದಾಖಲೆ ಮಂಡನೆ ಮಾಡಿದ ನಂತರ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ರಾಜ್ಯ ಸಭೆ ಕೂಡ ಶುಕ್ರವಾರ ಅನಿರ್ದಿಷ್ಟಾವಧಿ ಮುಂದೂಡಿಕೆ ಆಗಿದೆ. ಹೊಸ ಮುಖ್ಯಸ್ಥ ವೆಂಕಯ್ಯ ನಾಯ್ಡು ಅಧಿಕಾರ ಸ್ವೀಕರಿಸಿದ ನಿಟ್ಟಿನಲ್ಲಿ ವಂದನಾ ಭಾಷಣಗೈದು ಅಧಿವೇಶವನ್ನು ಮುಂದೂಡಿದರು.