ಸಿಬಿಎಫ್ಸಿ ಯನ್ನು ಮರು ರಚನೆ ಮಾಡಿದ ಸರ್ಕಾರ

ಕೇಂದ್ರ ಸರ್ಕಾರವು ಸಾಹಿತಿ ಪ್ರಸೂನ್ ಜೋಷಿ ಅವರನ್ನು ಸೆಂಟ್ರಲ್ ಬೋರ್ಡ್ ಅಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್ಸಿ) ನ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಜೋಷಿ ಅವರು ಪಹ್ಲಾಜ್ ನಿಹಲಾನಿ ಅವರ ಸ್ಥಾನಕ್ಕೆ ಬರಲಿದ್ದಾರೆ.

ಮುಂದಿನ ಆದೇಶ ಅಥವಾ ಮುಂದಿನ ಮೂರು ವರ್ಷಗಳ ವರೆಗೆ ತಕ್ಷಣದಿಂದಲೇ ಸಿಬಿಎಫ್ಸಿಯ ಪುನರಾಚನೆಯನ್ನು ಸರ್ಕಾರ ಘೋಷಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 12 ಸದಸ್ಯರನ್ನು ನೇಮಕ ಮಾಡಿದೆ. ಗೌತಮಿ ತಡಿಮಲ್ಲ, ನರೇಂದ್ರ ಕೊಹ್ಳಿ, ನರೇಶ್ ಚಂದ್ರ ಲಾಲ್, ವಿವೇಕ್ ಅಗ್ನಿಹೋತ್ರಿ ಮತ್ತು ವಿದ್ಯಾ ಬಾಲನ್ ಅವರು ಸದಸ್ಯರಾಗಿದ್ದಾರೆ.