ಹೊಸ ರೈಲು ಸೇವೆಗಳನ್ನು ಇಂದು ಘೋಷಿಸಲಿರುವ ರೈಲ್ವೇ

ಈ ವಾರಾಂತ್ಯದಲ್ಲಿ ವಿವಿಧ ಹೊಸ ರೈಲ್ವೇ ಸೇವೆಗಳನ್ನು ದೇಶಾದ್ಯಂತ ಭಾರತೀಯ ರೈಲ್ವೇ ಘೋಷಣೆ ಮಾಡಲಿದೆ. ಉತ್ತರ ಪ್ರದೇಶ, ಒಡಿಸ್ಸಾ, ಬಿಹಾರ್, ಪಂಜಾಬ್, ಡೆಲ್ಲಿ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಗುಜರಾತ್  ಹಾಗು ಜಮ್ಮು ಮತ್ತು ಕಾಶ್ಮೀರದ ಸಾವಿರಾರು ಜನರಿಗೆ ಈ ಯೋಜನೆಗಳ ಲಾಭ ದೊರೆಯಲಿದೆ.

ರೈಲ್ವೇ ಸಚಿವ ಸುರೇಶ್ ಪ್ರಭು ಕೆಲ ರೈಲು ಸೇವೆಗಳನ್ನು ನವದೆಹಲಿಯಿಂದ ವಿಡಿಯೋ ಕಾನ್ಪರೇನ್ಸ್ ಮೂಲಕ ಇಂದು ಉದ್ಘಾಟಿಸಲಿದ್ದಾರೆ, ಇನ್ನು ಕೆಲವಕ್ಕೆ ನಾಳೆ ಮುಂಬೈಯಿಂದ ಚಾಲನೆ ನೀಡಲಿದ್ದಾರೆ.