ಕೊರಿಯಾ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಪಂದ್ಯಾವಳಿ ಇಂದಿನಿಂದ ಆರಂಭ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಪಡೆದ ಪಿ.ವಿ. ಸಿಂಧು ಉತ್ತಮ ಪ್ರದರ್ಶನ ಮುಂದುವರಿಸುವ ನಿರೀಕ್ಷೆ

ಕೊರಿಯಾ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಪಂದ್ಯಾವಳಿ ಇಂದಿನಿಂದ ಆರಂಭವಾಗಲಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಪಡೆದ ಪಿ.ವಿ. ಸಿಂಧು ಇಲ್ಲಿಯೂ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವ ನಿರೀಕ್ಷೆ ಇದೆ. ಈಗಾಗಲೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕ ಗೆದ್ದುಕೊಂಡಿದ್ದ ಸಿಂಧು, ಕಳೆದ ತಿಂಗಳು ಗ್ಲ್ಯಾಸ್ಗೊದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಸೋಲ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯ ಮೊದಲ ಸಿಂಗಲ್ಸ್ ಪಂದ್ಯವಲ್ಲಿ ಹಾಂಕಾಂಗ್‌ನ ಚೆಂಕ್ ಗ್ಯಾನ್ ಯಿ ವಿರುದ್ಧ ಸಿಂಧು ಅಡಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಯುಎಸ್ ಓಪನ್ ಗ್ರ್ಯಾಂಡ್ ಪ್ರೀ ಗೋಲ್ಡ್ ಚಾಂಪಿಯನ್ ಎಚ್.ಎಸ್. ಪ್ರಣೊಯ್ ಹಾಂಕಾಂಗ್‌ನ ಆರನೇ ಶ್ರೇಯಾಂಕದ ಕಾ ಲಾಂಗ್ ಆಂಗಸ್ ವಿರುದ್ಧ ಹೋರಾಡಲಿದ್ದಾರೆ.

ಸಿಂಗಾಪುರ ಓಪನ್ ಚಾಂಪಿಯನ್ ಪಿ. ಸಾಯಿ ಪ್ರಣೀತ್ ಮೊದಲ ಪಂದ್ಯದಲ್ಲಿ ಹಾಂಕಾಂಗ್‌ನ ಹು ಯುನ್ ವಿರುದ್ಧ ಸೆಣಸಲಿದ್ದಾರೆ.

ಪರುಪಲ್ಲಿ ಕಶ್ಯಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಲಿನ್ ಯು ಸಿನ್ ವಿರುದ್ಧ ಹೋರಾಡಲಿದ್ದಾರೆ.

ಭಾರತದ ಭರವಸೆಯ ಷಟ್ಲರ್‌ಗಳಾದ ಸೈನಾ ನೇಹವಾಲ್, ಶ್ರೀಕಾಂತ್ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಮುಂದಿನ ವಾರ ನಡೆಯಲಿರುವ ಜಪಾನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಈ ಇಬ್ಬರೂ ಆಟಗಾರರು ತಯಾರಿಯಲ್ಲಿ ತೊಡಗಿದ್ದಾರೆ.