ಚೆನ್ನೈನ ವನಗರಂನಲ್ಲಿ ನಡೆಯಲಿರುವ ಎಐಎಡಿಎಂಕೆ ಪಕ್ಷದ ಮಹತ್ವದ ಸಭೆಗೆ ತಡೆ ನೀಡಲು ಮದ್ರಾಸ್ ಹೈಕೋರ‍್ಟ್ ನಿರಾಕರಣೆ

ಚೆನ್ನೈನ ವನಗರಂನಲ್ಲಿ ಇಂದು ನಡೆಯಲಿರುವ ಎಐಎಡಿಎಂಕೆ ಪಕ್ಷದ ಸಭೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದೆ.

ಇಬ್ಭಾಗವಾಗಿದ್ದ ಪಕ್ಷವು ಒಂದಾದ ಬಳಿಕ ನಡೆಯುತ್ತಿರುವ ಮೊದಲ ಸಾಮಾನ್ಯ ಸಭೆ ಇದಾಗಿದ್ದು, ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರ ರಾಜಕೀಯ ಭವಿಷ್ಯದ ಕುರಿತು ಇಂದಿನ ಸಭೆಯಲ್ಲಿ ನಿರ್ಧಾರ ಹೊರಬೀಳಲಿದೆ. ಶಶಿಕಲಾ ಸಂಬಂಧಿ ಟಿ.ಟಿ.ವಿ. ದಿನಕರನ್ ಅವರ ವಿಶ್ವಾಸಿ ಶಾಸಕ ಪಿ. ವೆಟ್ರಿವೇಲ್ ಇಂದಿನ ಸಭೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ರಾಜೀವ್ ಶಕ್‌ದೇರ್ ಮತ್ತು ಅಬ್ದುಲ್ ಖುದ್ದೋಸ್ ನೇತೃತ್ವದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿ ಅರ್ಜಿಯನ್ನು ತಿರಸ್ಕರಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ ೨೩ಕ್ಕೆ ಮುಂದೂಡಲಾಗಿದ್ದು, ಇಂದು ನಡೆಯಲಿರುವ ಸಭೆಯ ನಿರ್ಣಯದ ಕಾರ್ಯರೂಪವು ವಿಚಾರಣೆ ಬಳಿಕ ಜಾರಿಗೆ ಬರಲಿದೆ ಎಂದು ಪೀಠ ತಿಳಿಸಿದೆ.