ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಸಲು ಭಾರತ ಮತ್ತು ಅಫ್ಘಾನಿಸ್ತಾನ ನಿರ್ಧಾರ

ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಸಲು ಭಾರತ ಮತ್ತು ಅಫ್ಘಾನಿಸ್ತಾನ ನಿರ್ಧರಿಸಿದೆ.

ದೆಹಲಿಯಲ್ಲಿ ನಡೆದ ರಚನಾತ್ಮಕ ಪಾಲುದಾರಿಕೆಯ ಕುರಿತಾದ ಎರಡನೇ ನಿಯೋಗಮಟ್ಟದ ಮಾತುಕತೆಯ ನಂತರ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಹಾಗೂ ಅಫ್ಘಾನ್ ವಿದೇಶಾಂಗ ಸಚಿವ ಸಲ್ಲಾವುದ್ದೀನ್ ರಬ್ಬಾನಿ ಅವರ ನಡುವೆ ದೆಹಲಿಯಲ್ಲಿ ನಿಯೋಗಮಟ್ಟದ ಮಾತುಕತೆಗಳಾದ ನಂತರ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಆರೋಗ್ಯ, ಸಾರಿಗೆ, ಬಾಹ್ಯಾಕಾಶ ಮತ್ತು ಹೊಸ ಅಭಿವೃದ್ಧಿ ಪಾಲುದಾರಿಕೆ ವಲಯದಲ್ಲಿ ೪ ಒಪ್ಪಂದಗಳಿಗೆ ಸಹಿ ಹಾಕಿದವು.

ಅಫ್ಘಾನಿಸ್ತಾನದ ಪುನರ್ ನಿರ್ಮಾಣ, ಭದ್ರತೆ, ಸ್ಥಿರ ಶಾಂತಿಯುತ, ಸಮೃದ್ಧ ದೇಶಕಟ್ಟಲು ನಡೆದಿರುವ ಪ್ರಯತ್ನಗಳಿಗೆ ಸಹಕಾರ ಮುಂದುವರೆಯಲಿದೆ. ಭಯೋತ್ಪಾದನೆ, ಸಂಘಟಿತ ಅಪರಾಧ ತಡೆ ಹಾಗೂ ಮಾದಕ ದ್ರವ್ಯ ಸಾಗಣೆ ನಿಯಂತ್ರಣ, ಕಾಳಧನ ಸಕ್ರಮ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಹೋರಾಡಲು ಆಫ್ಘಾನಿಸ್ತಾನಕ್ಕೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ಭಾರತ ಸ್ಪಷ್ಟಪಡಿಸಿದೆ.

ಉತ್ತಮ ಆಡಳಿತ ವ್ಯವಸ್ಥೆ, ಪ್ರಜಾಪ್ರಭುತ್ವ ಸಂಸ್ಥೆಗಳು, ಮಾನವ ಸಂಪನ್ಮೂಲ ಸಾಮರ್ಥ್ಯ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸುವ ಕುರಿತು ಭಾರತ-ಆಫ್ಘಾನಿಸ್ತಾನದ ನಾಯಕರು ಚರ್ಚಿಸಿದರು.