ಆದಾಯ ತೆರಿಗೆ ಮೌಲ್ಯ ಮಾಪನ ಸಂದರ್ಭದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ವಿಧಿಸುವ ಸೇವಾ  ಶುಲ್ಕವನ್ನು  ಆದಾಯವೆಂದು  ಪರಿಗಣಿಸುವಂತೆ  ತೆರಿಗೆ ಇಲಾಖೆಗೆ  ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚನೆ

ಟ್ಯಾಕ್ಸ್ ರಿಟರ್ನ್ಸ್ ಗಳ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಹೊಟೇಲ್ ಗಳು ಮತ್ತು ರೆಸ್ಟೋರೆಂಟ್‌ಗಳು ವಿಧಿಸುತ್ತಿರುವ ಸೇವಾ ಶುಲ್ಕವನ್ನು ಆದಾಯವೆಂದು ಪರಿಗಣಿಸಬೇಕೆಂದು, ನೇರ ತೆರಿಗೆಗಳ ಕೇಂದ್ರೀಯ ಮಂಡಳಿಗೆ, ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.

ಪ್ರಸಕ್ತ, ಸೇವಾ ಶುಲ್ಕ ಪಾವತಿಸುವುದು ಗ್ರಾಹಕರಿಗೆ ಐಚ್ಛಿಕ ಎಂದು ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ ಕೂಡಾ, ಕೆಲವು ಹೋಟೆಲ್ ಗಳು ಹಾಗೂ ರೆಸ್ಟೋರೆಂಟ್‌ಗಳು ಶೇಕಡಾ ೫ ರಿಂದ ಶೇಕಡಾ ೨೦ ರವರೆಗೆ ಸೇವಾ ಶುಲ್ಕವನ್ನು ವಿಧಿಸುತ್ತಿವೆ. ಹೆಸರಾಂತ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳುಮಾರ್ಗಸೂಚಿಗಳ ಅನುಸರಣೆ ಮಾಡುತ್ತಿವೆಯಾದರೂ, ಸೇವಾ ಶುಲ್ಕ ಕುರಿತಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ ಮೂಲಕ ದೂರುಗಳು ಇನ್ನೂ ಬರುತ್ತಲೇ ಇವೆ ಎಂದು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.

ಸೇವಾಶುಲ್ಕದ ಕಾಲಂ ಅನ್ನು ಖಾಲಿಯಾಗಿ ಬಿಡಬೇಕು ಅಥವಾ ಅದು ಐಚ್ಛಿಕ ಎಂದು ಬಿಲ್ ನಲ್ಲಿ ನಮೂದಿಸಬೇಕೆಂದು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು  ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸೇವಾ ಶುಲ್ಕ ವಿಧಿಸಬಾರದೆಂಬ ಮಾರ್ಗಸೂಚಿಗಳನ್ನು ಹೋಟೆಲ್ ಹಾಗೂ ರೆಸ್ಟುರಾಂಟ್‌ಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಜಾರಿ ಮಾಡಲಾಗಿತ್ತು.