ಸಿಯೋಲ್‌ನಲ್ಲಿ  ಇಂದು ಆರಂಭವಾಗಲಿರುವ ಕೊರಿಯಾ ಮುಕ್ತ ಸೂಪರ್ ಸೀರಿಸ್ ಬ್ಯಾಡ್ಮಿಂಟನ್  ಪಂದ್ಯದಲ್ಲಿ  ತಮ್ಮ ಅಭಿಯಾನ ಆರಂಭಿಸಲಿರುವ ಪಿ.ವಿ. ಸಿಂಧು ಹಾಗೂ  ೧೩ ಮಂದಿ  ಭಾರತೀಯ ಆಟಗಾರರು.

ಸಿಯೋಲ್‌ನಲ್ಲಿಂದು ಕೊರಿಯಾ ಓಪನ್ ಸೂಪರ್ ಸೀರೀಸ್ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು ಸೇರಿದಂತೆ, ೧೪ ಮಂದಿ ಬ್ಯಾಡ್ಮಿಂಟನ್ ಆಟಗಾರರು ತಮ್ಮ ಆಟಗಾರರು ತಮ್ಮ ಅಭಿಯಾನ ಆರಂಭಿಸಲಿದ್ದಾರೆ.  ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಉಳಿದಿರುವ ಏಕೈಕ ಆಟಗಾರ್ತಿ ಸಿಂಧು ೫ನೇ ಶ್ರೇಯಾಂಕದಲ್ಲಿದ್ದಾರೆ.

ಸಿಂಧು ತಮ್ಮ ಆರಂಭಿಕ ಸುತ್ತಿನ ಪಂದ್ಯದಲ್ಲಿ ಹಾಂಗ್ ಕಾಂಗ್ ನ ಗಾನ್ ಯಿ ಚ್ಯುಂಗ್ ಅವರನ್ನು ಎದುರಿಸಲಿದ್ದಾರೆ. ತನ್ನ ವೃತ್ತಿ ಜೀವನದ ಎರಡನೇ ಸೂಪರ್ ಸೀರಿಸ್ ಪದಕದ ಮೇಲೆ ಕಣ್ಣಿಟ್ಟಿರುವ, ರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಶಿಪ್ ನ ಬೆಳ್ಳಿ ಪದಕ ವಿಜೇತೆ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಚ್ಯುಂಗ್ ವಿರುದ್ಧ ಸೋಲುಂಡಿಲ್ಲ.

ಬಿ. ಸಾಯಿ ಪ್ರಣೀತ್, ಹೆಚ್ ಎಸ್ ಪ್ರಣಾಯ್, ಪರುಪಳ್ಳಿ ಕಶ್ಯಪ್, ಸೌರಭ್ ವರ್ಮಾ ಮತ್ತು ಸಮೀರ್ ವರ್ಮಾ ಅವರುಗಳು ಪುರುಷರ ಸಿಂಗಲ್ಸ್ ಮೊದಲನೇ ಸುತ್ತಿನಲ್ಲಿ ಆಡಲಿದ್ದಾರೆ. ಕಿಡಂಬಿ ಶ್ರೀಕಾಂತ್ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಭಾರತೀಯ ಆಟಗಾರರು ಪುರುಷರ ಹಾಗೂ ಮಹಿಳೆಯರ ಹಾಗೂ ಮಿಶ್ರ ಡಬಲ್ಸ್ ವರ್ಗಗಳಲ್ಲೂ ಆಟವಾಡಲಿದ್ದಾರೆ.