ಮ್ಯಾನ್ಮಾರ್‌ನ ರೋಹಿಂಗ್ಯ ರಾಜ್ಯದಲ್ಲಿನ ಹಿಂಸಾಚಾರ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ಮ್ಯಾನ್ಮಾರ್‌ನ ರೋಹಿಂಗ್ಯ ರಾಜ್ಯದಲ್ಲಿ ನಡೆದಿರುವ ಹಿಂಸಾಚಾರ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸುಮಾರು ೮೦ ಲಕ್ಷಕ್ಕೂ ಅಧಿಕ ರೋಹಿಂಗ್ಯ ಮುಸ್ಲಿಂರು ದೇಶವನ್ನು ತೊರೆದು ಬಾಂಗ್ಲಾದೇಶದಲ್ಲ ಪಲಾಯನ ಮಾಡುತ್ತಿದ್ದಾರೆ. ಭದ್ರತಾ ಕಾರ್ಯಾಚರಣೆ ವೇಳೆ ಅಧಿಕ ಹಿಂಸಾಚಾರ ನಡೆದಿರುವ ವರದಿಗಳ ಬಗ್ಗೆ ೧೫ ಸದಸ್ಯರ ಮಂಡಳಿ ತೀವ್ರ ಆತಂಕ ವ್ಯಕ್ತಪಡಿಸಿದೆ.

ನಾಗರಿಕರ ರಕ್ಷಣೆಗೆ ಮತ್ತು ಕಾನೂನು ಸುವ್ಯವಸ್ಥೆ ಮರುಸ್ಥಾಪಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮಂಡಳಿ ಆಗ್ರಹಿಸಿದೆ.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಗುಟೆರರ್ಸ್, ಮ್ಯಾನ್ಮಾರ್ ತಕ್ಷಣವೇ ಪರಿಸ್ಥಿತಿ ತಿಳಿಗೊಳಿಸಲು ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.