ಯುಎನ್ಸಿಎಚ್ಆರ್’ಗೆ ಭಾರತದ ತಕ್ಕ ಉತ್ತರ

ಲೇಖನ: ಯೋಗೇಶ್ ಸೂದ್, ಪತ್ರಕರ್ತ

ರೋಹಿಂಗ್ಯಾ ಮುಸ್ಲಿಮರ ವಿಚಾರದಲ್ಲಿ ಮ್ಯಾನ್ಮಾರ್ ಸರ್ಕಾರ ನಡೆ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ (ಯುಎನ್ಸಿಎಚ್ಆರ್) ಹೈ ಕಮಿಷನರ್ ಜೀದ್ ರ ಆದ್ ಅಲ್ ಹುಸೇನ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ, ಭಾರತಕ್ಕೆ ಬಂದಿರುವ ಈ ಸಮುದಾಯದ ಜನರನ್ನು ದೇಶಾಂತರ ಕಳುಹಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಭಾರತ ತಳ್ಳಿಹಾಕಿದ್ದು, ಕಟು ಪ್ರತ್ಯುತ್ತರವನ್ನೇ ನೀಡಿದೆ.

1982ರಿಂದ ಒಂದು ದಶಲಕ್ಷದಷ್ಟು ರೋಹಿಂಗ್ಯಾ ಸಮುದಾಯದ ಮಂದಿ ಶೋಷಣೆಗೆ ಒಳಗಾಗಿದ್ದಾರೆ ಮತ್ತು ನಿರಾಶ್ರಿತರಾಗಿ ಅಲೆದಾಡುತ್ತಿದ್ದಾರೆ. ಬೌದ್ಧ ಸಮುದಾಯದ ಜನರು ಹೆಚ್ಚಿರುವ ಮ್ಯಾನ್ಮಾರ್ ದೇಶದಲ್ಲಿ ಈ ರೋಹಿಂಗ್ಯಾ ಜನರನ್ನು ಬಂಗಾಳಿಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಅವರು ಮೂಲತಃ ಬಾಂಗ್ಲಾದೇಶಕ್ಕೆ ಸೇರಿದವರು ಎಂದು ಹೇಳಲಾಗಿದೆ. ರೋಹಿಂಗ್ಯಾಗಳು ವಿಶ್ವದ ಅತಿ ದೊಡ್ಡ ನಿರಾಶ್ರಿತ ಜನಾಂಗೀಯ ಗುಂಪಾಗಿದ್ದು, ಮ್ಯಾನ್ಮಾರ್ ಸರ್ಕಾರ ಇವರನ್ನು ತಮ್ಮ ದೇಶದ ಕಾನೂನುಬದ್ಧ ನಾಗರಿಕರು ಎಂದು ಪರಿಗಣಿಸಿಲ್ಲ. ಹಲವು ನಿರ್ಬಂಧಗಳನ್ನು ಅವರ ಮೇಲೆ ಹೇರಲಾಗಿದೆ. ಅವರ ಸಂಚಾರ, ಆರ್ಥಿಕತೆ, ಶಿಕ್ಷಣ, ಆರೋಗ್ಯ ಮತ್ತು ಇತರ ಹಕ್ಕುಗಳಿಂದ ಅವರನ್ನು ದೂರವಿರಿಸಲಾಗಿದೆ. ಹೀಗಾಗಿಯೇ ಅವರು ಬಡತನದಿಂದ ಬಳಲುತ್ತಿದ್ದಾರೆ.

ಮ್ಯಾನ್ಮಾರ್ ಪೂರ್ವ ಕರಾವಳಿ ಮತ್ತು ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿರುವ ರಖಿನ್ ನಲ್ಲಿ ರೋಹಿಂಗ್ಯಾ ಉಗ್ರವಾದಿಗಳ ಮೇಲೆ ಮಿಲಿಟರಿ ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಸುಮಾರು 400 ರೋಹಿಂಗ್ಯಾಗಳು ಮೃತಪಟ್ಟಿದ್ದಾರೆ. ರೋಹಿಂಗ್ಯಾ ಸಮುದಾಯದಲ್ಲಿರುವ ಉಗ್ರವಾದಿಗಳನ್ನು ಹತ್ತಿಕ್ಕುವ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಯಿತು ಎಂದು ಮ್ಯಾನ್ಮಾರ್ ಸೇನೆ ಸಮರ್ಥಿಸಿಕೊಂಡಿದೆ. ಕಳೆದ ವಾರ ಸುಮಾರು 30000 ರೋಹಿಂಗ್ಯಾಗಳು ಬಾಂಗ್ಲಾ ಗಡಿ ದಾಟಿದ್ದು, ಢಾಕಾ ನೀಡಿರುವ ಮಾಹಿತಿ ಪ್ರಕಾರ ಸುಮಾರು 4,00,000 ರೋಹಿಂಗ್ಯಾ ವಲಸೆಗಾರರು ಈಗಾಗಲೇ ಬಾಂಗ್ಲಾದಲ್ಲಿದ್ದಾರೆ. ಭಾರತಕ್ಕೆ ಸುಮಾರು 16000 ರೋಹಿಂಗ್ಯಾಗಳು ಬಂದಿದ್ದಾರೆ. ಈ ಅಲ್ಪಸಂಖ್ಯಾತ ಜನಾಂಗೀಯ ಸಮುದಾಯದ ಮೇಲೆ ದಾಳಿ ಮಾಡಿರುವುದು ರಖೀನ್ ಪ್ರಾಂತ್ಯದಲ್ಲಿ ಬಂಡುಕೋರರ ಪ್ರತಿರೋಧ ಚಟುವಟಿಕೆ ಹೆಚ್ಚಾಗಿಸಬಹುದು ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ನಿರಾಶ್ರಿತ ವಲಸೆಗಾರರ ಬಗ್ಗೆ ವಿಶ್ವಸಂಸ್ಥೆಯ ಹೈ ಕಮಿಷನರ್ ಮಾಡಿದ ಕೆಲವು ಅಭಿಪ್ರಾಯಗಳ ಬಗ್ಗೆ ಬಾರತಕ್ಕೆ ಸಮಾಧಾನವಿಲ್ಲ. ಕೆಲ ಆಯ್ದ, ನಿಖರವಲ್ಲದ ವರದಿಗಳನ್ನು ಆಧರಿಸಿ ಮುಂದಿಟ್ಟಿರುವ ಅಭಿಪ್ರಾಯಗಳಲ್ಲಿ ಸತ್ಯಾಂಶವಿಲ್ಲ ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಹೇಳಿದ್ದಾರೆ.

ಅಕ್ರಮ ವಲಸೆಗಾರರು, ಮುಖ್ಯವಾಗಿ ಭದ್ರತೆಗೆ ಹಾನಿಯುಂಟುಮಾಡುವವರ ಬಗ್ಗೆ ಭಾರತ ಕಳವಳ ಹೊಂದಿದೆ. ಹೀಗಾಗಿ ಈ ನಿಟ್ಟಿನಲ್ಲಿ ಅನುಸರಿಸುವ ಕಾನೂನುಗಳ ಬಗ್ಗೆ ತಪ್ಪು ಭಾವನೆ ಹೊಂದುವುದ ಸರಿಯಲ್ಲ. ರಖಿನ್ ಪರಿಸ್ಥಿತಿ ಮತ್ತು ರೋಹಿಂಗ್ಯಾಗಳ ಶೋಚನೀಯ ಸ್ಥಿತಿ ಬಗ್ಗೆ ಭಾರತಕ್ಕೆ ಕಾಳಜಿ ಇದೆ ಎಂಬುದನ್ನು ಹಿಂದೆಯೂ ಭಾರತ ಸ್ಪಷ್ಟಪಡಿಸಿದೆ. ರಖೀನ್ ನಲ್ಲಿ ನಾಗರಿಕರ ಕಲ್ಯಾಣದ ಬಗ್ಗೆ ಹೆಚ್ಚು ಗಮನಹರಿಸುವುದು ಸೂಕ್ತ ಎಂದು ಭಾರತ ಮ್ಯಾನ್ಮಾರ್ ಗೆ ಸಲಹೆ ನೀಡಿದ್ದು, ಹಿಂಸಾಚಾರ ಕೊನೆಗೊಂಡು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದೆ.

ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ “ಸಂಯಮ ಮತ್ತು ಪರಿಪಕ್ವತೆ” ತೋರಿಸುವುದರ ಮೂಲಕ ಮಯನ್ಮಾರ್ ನ ಬಿಕ್ಕಟ್ಟಿನ ರಖೀನ್ ಪ್ರಾಂತ್ಯದಲ್ಲಿ ಹಿಂಸಾಚಾರ ತಡೆಗಟ್ಟಬೇಕು ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಖಿನ್ ನಲ್ಲಿ ಮ್ಯಾನ್ಮಾರ್ ಭದ್ರತಾ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಕೂಡ ದೆಹಲಿ ಬಲವಾಗಿ ಖಂಡಿಸಿತ್ತು.

ಉಭಯ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಹೋರಾಡುವ ತಮ್ಮ ನಿರ್ಣಯವನ್ನು ದೃಢೀಕರಿಸಿವೆ ಮತ್ತು ಯಾವುದೇಕಾರಣದಿಂದಾಗಿ ಉಗ್ರವಾದದ ಸಮರ್ಥನೆಯನ್ನು ಒಪ್ಪುವುದಿಲ್ಲ. ಮ್ಯಾನ್ಮಾರ್ ಗೆ ಪ್ರಧಾನ ಮಂತ್ರಿಯವರ ಇತ್ತೀಚಿನ ಭೇಟಿಯಸಮಯದಲ್ಲಿ; ”ಭದ್ರತಾ ಪಡೆಗಳ ಸಾವು-ನೋವುಗಳು ಮತ್ತು ಇತರ ಮುಗ್ಧ ಜನರ ಮೇಲೆ ಆಗುವ ದಾಳಿಗಳ ಬಗ್ಗೆ ಅವರು ಕಳವಳವ್ಯಕ್ತಪಡಿಸಿದ್ದರು. ಶಾಂತಿ, ಸಾಮುದಾಯಿಕ ಸಾಮರಸ್ಯ, ನ್ಯಾಯ, ಘನತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸಂಬಂಧಿಸಿದಂತೆಪರಿಹಾರ ಕಂಡುಕೊಳ್ಳಬೇಕೆಂದು ಅವರು ಹೇಳಿದ್ದರು. ಮ್ಯಾನ್ಮಾರ್ ಸರಕಾರದೊಂದಿಗೆ ರಖಿನ್ ಪ್ರಾಂತ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಭಾರತ ನೆರವು ನೀಡುವುದಾಗಿ ಪ್ರಧಾನ ಮಂತ್ರಿಯವರ ಭೇಟಿಯ ಸಮಯದಲ್ಲಿ ಮಾತುಕತೆ ನಡೆಸಲಾಗಿತ್ತು.

ಲುಕ್ ಈಸ್ಟ್ ಪಾಲಿಸಿಗೆ ಸಂಬಂಧಿಸಿದಂತೆ ಭಾರತಕ್ಕೆ ಮ್ಯಾನ್ಮಾರ್ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರ. ಉಗ್ರವಾದವನ್ನು ಹತ್ತಿಕ್ಕುವಲ್ಲಿ ಎರಡೂ ದೇಶಗಳು ತಮ್ಮ ಬದ್ಧತೆಯನ್ನು ಪ್ರದರ್ಶಿಸಿವೆ. ರಖಿನ್ ನ ಸಾಮಾಜಿಕ‑ಆರ್ಥಿಕ ಪ್ರಗತಿಗಾಗಿ ಮೂಲ ಸೌಕರ್ಯ ಯೋಜನೆಗಳನ್ನು ಭಾರತ ಕೈಗೆತ್ತಿಕೊಂಡು ಸಹಕರಿಸಲಿದೆ.

ಯುಎನ್ನ 1951 ರ ನಿರಾಶ್ರಿತ ಸಮಾವೇಶಕ್ಕೆ ಅಥವಾ 1967 ರ ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದ ಪ್ರೊಟೊಕಾಲ್ಗೆ ಸಹಿಹಾಕದಿದ್ದರೂ ಸಹ, ಭಾರತವು ಆಶ್ರಯವನ್ನು ಒದಗಿಸಲು ಯಾವುದೇ ಬಾಧ್ಯತೆ ಹೊಂದಿಲ್ಲ. ಹೇಗಾದರೂ, ಭಾರತ ಮತ್ತು ಅವಳಮಾನವ ಹಕ್ಕುಗಳ ದಾಖಲೆಯನ್ನು ತತ್ವಗಳನ್ನು ಎತ್ತಿಹಿಡಿಯುತ್ತದೆ ನಿಷ್ಪಾಪ. ಭಾರತ, ಹಿಂದೆ ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನ,ಮಯನ್ಮಾರ್, ಶ್ರೀಲಂಕಾ, ಟಿಬೆಟ್ ಮತ್ತು ಅಫ್ಘಾನಿಸ್ತಾನದಿಂದ ನಿರಾಶ್ರಿತರನ್ನು ಸ್ವೀಕರಿಸಿದೆ. ರೋಹಿಂಗ ದುರಂತವುಅಂತರರಾಷ್ಟ್ರೀಯ ಪ್ರತಿಕ್ರಿಯೆಯನ್ನು ಕೋರುತ್ತದೆ. ಏಕೆಂದರೆ ಗುಂಪಿನ ಮೇಲಿನ ಆಕ್ಷೇಪಣೆಗಳು ಹೆಚ್ಚಾಗಿದೆ ಮತ್ತು ಬದುಕುಳಿದವರುಈಗಾಗಲೇ ತುಂಬಿರುವ ನಿರಾಶ್ರಿತರ ಶಿಬಿರಗಳಲ್ಲಿ ನೆಲೆಗೊಳ್ಳುತ್ತಾರೆ. ಮಯನ್ಮಾರ್ ಸರ್ಕಾರ ದೀರ್ಘಕಾಲದ ಉಲ್ಬಣಿಸಿರುವವಿವಾದಕ್ಕೆ ಮುಂಚಿನ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಚೆನ್ನಾಗಿರುತ್ತದೆ.

1951ರ ವಿಶ್ವಸಂಸ್ಥೆಯ ರೆಫ್ಯುಜಿ ಕ್ನವೆನ್ಷನ್ ಅಥವಾ 1967ರ ರೆಫ್ಯುಜಿಗಳ ಕುರಿತ ಪ್ರೊಟೊಕಾಲ್ ಗೆ ಭಾರತ ಸಹಿ ಹಾಕದಿದ್ದರೂ, ಅವರಿಗೆ ಆಶ್ರಯವನ್ನು ಒದಗಿಸಲು ಯಾವುದೇ ಬಾಧ್ಯತೆ ಹೊಂದಿಲ್ಲ. ಭಾರತ, ಹಿಂದೆ ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನ, ಮಯನ್ಮಾರ್, ಶ್ರೀಲಂಕಾ, ಟಿಬೆಟ್ ಮತ್ತು ಅಫ್ಘಾನಿಸ್ತಾನದಿಂದ ಬಂದಿದ್ದ ನಿರಾಶ್ರಿತರಿಗೆ ಆಶ್ರಯ ನೀಡಿದೆ. ರೋಹಿಂಗ್ಯ ದುರಂತಕ್ಕೆ ಅಂತರರಾಷ್ಟ್ರೀಯ ಸಮುದಾಯ ಸ್ಪಂದಿಸಬೇಕು. ಏಕೆಂದರೆ ಈಗಾಗಲೇ ನಿರಾಶ್ರಿತ ಕೇಂದ್ರಗಳಲ್ಲಿ ರೋಹಿಂಗ್ಯಾ ಗುಂಪುಗಳು ತುಂಬಿಹೋಗಿವೆ. ದೀರ್ಘಕಾಲದ ಈ ಸಮಸ್ಯೆಗೆ ಮಯನ್ಮಾರ್ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳುವುದು ತುರ್ತಾಗಿ ಆಗಬೇಕಿದೆ.