ಜುಲೈನ ಜಿಎಸ್‌ಟಿಆರ್-೧ ರಿಟರ್ನ್ಸ್ ಸಲ್ಲಿಕೆಗೆ ಇಂದು ಕೊನೆ ದಿನ

ಜುಲೈ ತಿಂಗಳ ಜಿಎಸ್‌ಟಿಆರ್-೧ ರಿಟರ್ನ್ಸ್ ಅನ್ನು ಸಲ್ಲಿಸಲು ಇಂದು ಕಡೆಯ ದಿನವಾಗಿದ್ದು, ಈ ಅವಧಿ ವಿಸ್ತರಣೆ ಇಲ್ಲ.
ಇದುವರೆಗೆ ಜುಲೈ ತಿಂಗಳ ಜಿಎಸ್‌ಟಿಆರ್-೧ ರಿಟರ್ನ್ಸ್ ಸಲ್ಲಿಸದ ತೆರಿಗೆ ಪಾವತಿದಾರರು ಈ ಕೂಡಲೇ ರಿಟರ್ನ್ಸ್ ಸಲ್ಲಿಸುವಂತೆ ಹಣಕಾಸು ಸಚಿವಾಲಯ ತಿಳಿಸಿದೆ.
ತೆರಿಗೆ ಪಾವರಿದಾರರು ಜಿಎಸ್‌ಟಿಆರ್-೧ ರಿಟರ್ನ್ಸ್ ಅನ್ನು ಇಂದು ಸಲ್ಲಿಸಿದರೆ ಖರೀದಿದಾರರಿಗೆ ಮುಂದಿನ ಜಿಎಸ್‌ಟಿಆರ್-೨ಎ ಗೆ ಸ್ವಯಂ ಆಗಿ ಚಾಲನೆ ಸಿಗಲಿದೆ.
ಖರೀದಿದಾರರು ತಮ್ಮ ಜಿಎಸ್‌ಟಿಆರ್-೨ಎ ಅನ್ನು ಬದಲಾಯಿಸಿಕೊಳ್ಳಲು ಈ ಪ್ರಕ್ರಿಯೆ ಸಹಕಾರಿಯಾಗಲಿದೆ.
ಜಿಎಸ್‌ಟಿಆರ್-೨ ಅನ್ನು ಆಧರಿಸಿ ಖರೀದಿದಾರರು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಕೊನೆಯ ದಿನವಾದ ಇಂದು ಜಿಎಸ್‌ಟಿಆರ್-೧ ರಿಟರ್ನ್ಸ್ ಅನ್ನು ತೆರಿಗೆ ಪಾವತಿದಾರರು ಸಲ್ಲಿಸದಿದ್ದಲ್ಲಿ ಅವರ ಖರೀದಿದಾರರು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳಲು ಅಡಚಣೆಯಾಗಲಿದೆ.
ಕೊನೆಯ ದಿನಾಂಕದೊಳಗೆ ಜಿಎಸ್‌ಟಿಆರ್-೧ ರಿಟರ್ನ್ಸ್‌ನಲ್ಲಿ ಸರಕು ಮತ್ತು ಸೇವಾದಾರರು ಅದರಲ್ಲೂ ವಿಶೇಷವಾಗಿ ಬಿ೨ಬಿ ಪೂರೈಕೆದಾರರು ತಮ್ಮ ಸೇವೆ ಹಾಗೂ ಪೂರೈಕೆ ವಿವರಗಳನ್ನು ಸಲ್ಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.