ಅಗಸ್ವಾ ವೆಸ್ಟ್‌ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣ: ಯೂರೋಪ್‌ನ ಮೂವರು ಮಧ್ಯವರ್ತಿಗಳಿಗೆ ಸಿಬಿಐನಿಂದ ಜಾಮೀನುರಹಿತ ವಾರಂಟ್

ಅಗಸ್ಟಾ ವೆಸ್ಟ್ ಲ್ಯಾಂಡ್ ವಿ ವಿ ಐ ಪಿ ಹೆಲಿಹಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ಕೋರ್ಟ್ ಮೂವರು ಯುರೋಪಿಯನ್ ಮಧ್ಯವರ್ತಿಗಳು ಹಾಗೂ ವಾಯುಪಡೆಯ ನಿವೃತ್ತ ಮುಖ್ಯಸ್ಥ ಎಸ್ ಪಿ ತ್ಯಾಗಿ  ಸೇರಿದಂತೆ ಇನ್ನೂ ಅನೇಕ ಆರೋಪಿಗಳಿಗೆ ನಿನ್ನೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಕಳೆದ  ಸೆಪ್ಟಂಬರ್‌ನಲ್ಲಿ ಇವರಿಗೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.  ಎಂದು ಸಿ ಬಿ ಐ ತಿಳಿಸಿದೆ. ಕಾರ‍್ಲೋ ಎಫ್ ಗೆರೋಸಾ, ಕ್ರಿಸ್ಟಿಯನ್ ಮೈಕಲ್ ಹಾಗೂ ಗುಡೋ ಹಾಶ್ಕೆ ಈ ಹಗರಣದಲ್ಲಿ ಮಧ್ಯವರ್ತಿಗಳಾಗಿದ್ದರು.   ತ್ಯಾಗಿ ಹಾಗೂ ಐವರು ವಿದೇಶಿಯರೂ ಅತಿಗಣ್ಯರಿಗೆ ಮೀಸಲಾದ ೧೨ ಹೆಲಿಕಾಪ್ಟರ್ ಖರೀದಿಯಲ್ಲಿ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಯು ಪಿ ಎ ಸರ್ಕಾರದ ಅವಧಿಯಲ್ಲಿ  ೨೦೧೦ರಲ್ಲಿ ಈ ಖರೀದಿ ನಡೆದಿದ್ದು  ೩ ಸಾವಿರದ ೭೨೬ ಕೋಟಿ ರೂಪಾಯಿಯನ್ನು ನೀಡಲಾಗಿತ್ತು.

ಇದರಿಂದ ೨ ಸಾವಿರದ ೬೬೬ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.