ಭಾರತ‑ಜಮೈಕಾ ಸಂಬಂಧದಲ್ಲಿ ಹೊಸ ಬೆಳಕು

ಕೆರಿಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ದ್ವೀಪ ರಾಷ್ಟ್ರ ಜಮೈಕಾದ ವಿದೇಶಾಂಗ ವ್ಯವಹಾರ ಗಳ ಸಚಿವರಾದ ಕಾಮಿನಾ ಜಾನ್ಸನ್ಸ್ಮಿತ್ ಅವರ ಭೇಟಿ, ಭಾರತ_ಜಮೈಕಾ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದು ದ್ವಿಪಕ್ಷೀಯವ್ಯಾಪಾರ ಸಂಬಂಧಗಳ ಪರಿಮಾಣವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಲಿದೆ. ಇದು ಭಾರತಕ್ಕೆ ಜಮೈಕಾದ ವಿದೇಶಾಂಗ ಮಂತ್ರಿನೀಡುತ್ತಿರುವ ಮೊದಲ ಭೇಟಿಯಾಗಿದ್ದು, ನವ ದೆಹಲಿ ಮತ್ತು ಕಿಂಗ್ಸ್ಟನ್ ನಡುವಿನ 5 ನೇ ವಿದೇಶಾಂಗ ಕಚೇರಿಗಳ ಸಮಾಲೋಚನೆಗೆವೇದಿಕೆ ಸೃಷ್ಟಿಸಿತು. ಜಮೈಕಾದೊಂದಿಗಿನ ತನ್ನ ನಿಕಟ ಸಂಬಂಧಗಳಿಗೆ ಭಾರತವು ಪ್ರಾಮುಖ್ಯತೆಯನ್ನು ನೀಡಿದ್ದು, ವಿದೇಶಾಂಗವ್ಯವಹಾರಗಳ ಸಚಿವ ಡಾ.ವಿ. ಕೆ. ಸಿಂಗ್ ಕೂಡ ಕಳೆದ ಎರಡು ವರ್ಷಗಳಿಂದ ಕಿಂಗ್ ಸ್ಟನ್ ಗೆ ಎರಡು ಬಾರಿ ಭೇಟಿ ನೀಡಿದ್ದಾರೆ.

ಜಮೈಕಾ ಸಚಿವರಾದ ಸ್ಮಿತ್ ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ, ಎರಡೂ ದೇಶಗಳದ್ವಿಪಕ್ಷೀಯ ಸಂಬಂಧಗಳ ಕುರಿತು ವಿಸ್ತೃತ ಮಾತುಕತೆ ನಡೆಸಿದರು. ಬಹುಪಕ್ಷೀಯ ವಿಷಯಗಳ ಮೇಲೂ ಚರ್ಚೆ ಮಾಡಲಾಯಿತು.ವ್ಯಾಪಾರ, ಹೂಡಿಕೆ, ಆರೋಗ್ಯ, ಆರೋಗ್ಯ ಪ್ರವಾಸೋದ್ಯಮ, ಕೌಶಲ್ಯ ನಿರ್ಮಾಣ, ಕೃಷಿ, ಸಂಸ್ಕೃತಿ ಮುಂತಾದ ವಿಷಯಗಳಲ್ಲಿನಸಹಕಾರಕ್ಕೂ ಆದ್ಯತೆ ನೀಡಲಾಯಿತು. ಚಂಡಮಾರುತ ಪೀಡಿತ ಪ್ರದೇಶಗಳಿಗೆ ಡಾಲರ್ 200,000  ನೆರವು ಹಾಗೂ ಜಮೈಕಾಕ್ಕೆ ಡಾಲರ್150,000 ಮೌಲ್ಯದ ಔಷಧಿಗಳ ನೆರವು ನೀಡಿದ್ದಕ್ಕೆ ಸಚಿವರು ಕೃತಜ್ಞತೆ ವ್ಯಕ್ತಪಡಿಸಿದರು.

ಜಮೈಕಾದ ಪ್ರವಾಸೋದ್ಯಮ ಸಚಿವರಾದ ಕೆ. ಜೆ. ಆಲ್ಫೋನ್ಸ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ. ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಪ್ರವಾಸೋದ್ಯಮ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆ ಚರ್ಚಿಸಿದರು.ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಷನ್ (FICCI) ಜತೆಗೆ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ನಡೆಯಿತು.ಪ್ರಮುಖ ಭಾರತೀಯ ಐಟಿ ಕಂಪನಿಗಳು ಮತ್ತು ಮುಂಬೈನಲ್ಲಿ ವ್ಯಾಪಾರ ಸಮುದಾಯವನ್ನು ಕೂಡ ಆಲ್ಪೋನ್ಸ್ ಅವರು ಭೇಟಿಮಾಡಿದರು.

ಸಣ್ಣ ಪ್ರಮಾಣದ ಆರ್ಥಿಕತೆ ಹಾಗೂ ಭಾರತದಿಂದ ಬಹುದೂರವಿರುವುದರಿಂದಾಗಿ ಭಾರತ ಮತ್ತು ಜಮೈಕಾದ ನಡುವಿನ ದ್ವಿಪಕ್ಷೀಯಆರ್ಥಿಕ ಮತ್ತು ವಾಣಿಜ್ಯ ಸಂವಹನಗಳು ಸೀಮಿತವಾಗಿವೆ. ಹಾಗಿದ್ದರೂ ಕೆರಿಬಿಯನ್ ಜೊತೆ ಆದ್ಯತೆಯ ವ್ಯಾಪಾರ ಸಂಬಂಧ ಬೆಳೆಯುತ್ತಿದೆ. 2001ರಲ್ಲಿ ನೀರಿನ ಪಂಪ್ ಗಳನ್ನು ಜಮೈಕಾದಿಂದ ಆಮದು ಮಾಡಿಕೊಳ್ಳಲು ಭಾರತ 7.5 ದಶಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಹಣವನ್ನು ನೀಡಿತ್ತು. ಅಲ್ಲದೆ 2009 ರಲ್ಲಿ ಜಮೈಕಾದ ಐಸಿಟಿ ಸಾಮರ್ಥ್ಯ ಅಭಿವೃದ್ಧಿ ಯೋಜನೆಯಡಿ ಭಾರತ ಜಮೈಕಾದಲ್ಲಿಐಟಿ ಕೇಂದ್ರವೊಂದನ್ನು ಸ್ಥಾಪನೆ ಮಾಡಿತು. ಔಷಧಗಳ ರೂಪದಲ್ಲಿ 200,000 ಅಮೆರಿಕನ್ ಡಾಲರ್ ವೆಚ್ಚದ ಔಷಧಿಗಳನ್ನು ನೀಡಲಾಯಿತು ಮತ್ತು 2004 ರಲ್ಲಿ ಚಂಡಮಾರುತದಿಂದ ತತ್ತರಿಸಿದ ದ್ವೀಪಕ್ಕೆ ವೈದ್ಯಕೀಯ ಸರಬರಾಜುಗಳನ್ನು ಭಾರತ ಸರ್ಕಾರ ಪೂರೈಸಿತು. ಸಬೈನಾ ಪಾರ್ಕ್ ನಲ್ಲಿ ಫ್ಲಡ್ ಲೈಟ್ ಗಳನ್ನು ಸ್ಥಾಪಿಸಲು ಭಾರತ 2.1 ಮಿಲಿಯನ್ ಡಾಲರ್ ನೆರವನ್ನು ನೀಡಿತು.

ಈಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ಅದು ಗಣನೀಯವಾಗಿಲ್ಲ. 2016-17ರಲ್ಲಿ ಜಮೈಕಾಕ್ಕೆ ಅಮೆರಿಕನ್ ಡಾಲರ್  43.44 ಮಿಲಿಯನ್ ನಷ್ಟು ರಫ್ತು ಮಾಡಲಾಗಿತ್ತು. ಆ ದೇಶದಿಂದ ಆಮದು ಮಾಡಿಕೊಂಡ ಪ್ರಮಾಣ 1.17 ಮಿಲಿಯನ್ ಅಮೆರಿಕನ್ ಡಾಲರ್ ಎಂದು ಅಂಕಿ ಅಂಶಗಳು ಹೇಳುತ್ತವೆ. ಒಟ್ಟು ವ್ಯಾಪಾರ 44.61 ಮಿಲಿಯನ್ ಯುಎಸ್ಡಾಲರ್ ಮತ್ತು ವ್ಯಾಪಾರ

ಲೇಖನ : ವಿನೀತ್ ವಾಹಿ, ಪತ್ರಕರ್ತ