೧೭ ವರ್ಷದೊಳಗಿನವರ ಫಿಫಾ-ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ: ಘಾನಾ ವಿರುದ್ಧ ಭಾರತಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ. 

ಕೋಲ್ಕತಾದಲ್ಲಿ ನಿನ್ನೆ ನಡೆದ ೧೭ ವರ್ಷದೊಳಗಿನವರ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್, ಮೆಕ್ಸಿಕೊ ವಿರುದ್ಧ  ೩-೨ ಅಂತರ ಜಯ ಸಾಧಿಸಿದೆ.

ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಚಿಲಿ ವಿರುದ್ಧ ಇರಾಕ್  ೩-೦ ಗೋಲುಗಳ ಅಂತರದ ಜಯ ಸಾಧಿಸಿತು.  ಗುವಾಹತಿಯಲ್ಲಿ ನಡೆದ ಇ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ಜಪಾನ್‌ನನ್ನು ೨-೧ ಅಂತರದಲ್ಲಿ ಪರಾಭವಗೊಳಿಸಿತು.  ಮತ್ತೊಂದು ಪಂದ್ಯದಲ್ಲಿ ನ್ಯೂ ಕ್ಯಾಲೇಡೊನಿಯ ವಿರುದ್ಧ ಹೊಂಡುರಾಸ್ ೫-೦ ಅಂತರದ ಜಯ ಸಾಧಿಸಿತು.

ದೆಹಲಿಯಲ್ಲಿ ಇಂದು ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಭಾರತ ಮತ್ತು ಘಾನಾ ಸೆಣಸಲಿದ್ದು, ಭಾರತಕ್ಕೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.  ಮತ್ತೊಂದೆಡೆ ನವಿಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಮೆರಿಕಾ ಮತ್ತು ಕೊಲಂಬಿಯಾ ಸೆಣಸಲಿವೆ.  ಪರುಗ್ವೆ ಮತ್ತು ಟರ್ಕಿ ಹಾಗೂ ಮಾಲಿ ಮತ್ತು ನ್ಯೂಜಿಲ್ಯಾಂಡ್ ನಡುವಣ ಪಂದ್ಯಗಳು ಸಹ ಇಂದು ನಡೆಯಲಿವೆ.