ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ೩ ದಿನಗಳ ಕಾಲ ಪಿಲಿಫೈನ್ಸ್ ರಾಜಧಾನಿ ಮಲಿನಾಗೆ ಭೇಟಿ ನೀಡಲಿದ್ದಾರೆ. ಪಿಲಿಫೈನ್ಸ್‌ಗೆ ಪ್ರಧಾನಿ ಅವರ ಮೊದಲ ಭೇಟಿ ಇದಾಗಲಿದ್ದು, ಅವರು ಅಸಿಯಾನ್ – ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಫಿಲಿಫೈನ್ಸ್‌ಗೆ ತೆರಳುವ ಮುನ್ನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಪ್ರಧಾನಮಂತ್ರಿ, ಪೂರ್ವ ದೇಶಗಳ ಕ್ರಿಯಾ ನೀತಿಯ ಚೌಕಟ್ಟಿನಲ್ಲಿ ಇಂಡೋ-ಪೆಸಿಫಿಕ್ ವಲಯದಲ್ಲಿ ವಿಶೇಷವಾಗಿ ಆಸಿಯಾನ್ ಸದಸ್ಯ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಭಾರತದ ಬದ್ಧತೆಯನ್ನು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಕೇತಿಸಲಾಗುವುದು ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ – ಆರ್‌ಸಿಇಪಿ ನಾಯಕರ ಸಭೆ ಹಾಗೂ ಆಸಿಯಾನ್ ವ್ಯಾಪಾರ ಮತ್ತು ಹೂಡಿಕೆ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಒಟ್ಟಾರೆ ವ್ಯಾಪಾರದಲ್ಲಿ ಶೇಕಡ ೧೦.೮೫ ರಷ್ಟು ಪಾಲು ಹೊಂದಿರುವ ಆಸಿಯಾನ್ ರಾಷ್ಟ್ರಗಳೊಂದಿಗೆ ವ್ಯಾಪಾರ ಬಾಂಧವ್ಯ ಮತ್ತಷ್ಟು ಹೆಚ್ಚಿಸಿ ನಿಕಟ ಸಹಕಾರ ವೃದ್ಧಿಸುವುದು ಪ್ರಧಾನಿ ಭೇಟಿಯ ಉದ್ದೇಶವಾಗಿದೆ. ಪಿಲಿಫೈನ್ಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಸಹ ಪ್ರಧಾನಿ ಭೇಟಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ-ಐಆರ್‌ಆರ್‌ಐ ಹಾಗೂ ಮಹಾವೀರ್ ಪಿಲಿಫೈನ್ಸ್ ಫೌಂಡೇಷನ್‌ಗೂ ಭೇಟಿ ನೀಡಲಿದ್ದಾರೆ. ಈ ಸಂಸ್ಥೆಗಳು ಜಾಗತಿಕ ಆಹಾರ ಕೊರತೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಅತ್ಯುತ್ತಮ ಗುಣಮಟ್ಟದ ಭತ್ತದ ಬೀಜವನ್ನು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ. ಬಹಳಷ್ಟು ಸಂಖ್ಯೆಯ ಭಾರತೀಯ ವಿಜ್ಞಾನಿಗಳು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಶೋಧನೆ ಹಾಗೂ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಾರಣಾಸಿಯಲ್ಲಿ ಐಆರ್‌ಆರ್‌ಐನ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕೇಂದ್ರ ರೈತರ ಕೌಶಲ್ಯವನ್ನು ಹೆಚ್ಚಿಸುವುದರ ಜೊತೆಗೆ ಬೆಳೆ ವೈವಿಧ್ಯತೆ, ಮೌಲ್ಯವರ್ಧನೆ, ಉತ್ಪಾದನಾ ವೆಚ್ಚ ಇಳಿಕೆ, ಅಕ್ಕಿ ಉತ್ಪಾದನೆ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ. ತಮ್ಮ ಪಿಲಿಫೈನ್ಸ್ ಭೇಟಿ ಆ ದೇಶದೊಂದಿಗಿನ ರಾಜಕೀಯ- ಭದ್ರತಾ, ಆರ್ಥಿಕ ಹಾಗೂ ಸಾಮಾಜಿಕ ಸಾಂಸ್ಕೃತಿಕ ಅಡಿಪಾಯವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ೩ ದಿನಗಳ ಕಾಲ ಪಿಲಿಫೈನ್ಸ್ ರಾಜಧಾನಿ ಮಲಿನಾಗೆ ಭೇಟಿ ನೀಡಲಿದ್ದಾರೆ. ಪಿಲಿಫೈನ್ಸ್‌ಗೆ ಪ್ರಧಾನಿ ಅವರ ಮೊದಲ ಭೇಟಿ ಇದಾಗಲಿದ್ದು, ಅವರು ಅಸಿಯಾನ್ – ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಫಿಲಿಫೈನ್ಸ್‌ಗೆ ತೆರಳುವ ಮುನ್ನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಪ್ರಧಾನಮಂತ್ರಿ, ಪೂರ್ವ ದೇಶಗಳ ಕ್ರಿಯಾ ನೀತಿಯ ಚೌಕಟ್ಟಿನಲ್ಲಿ ಇಂಡೋ-ಪೆಸಿಫಿಕ್ ವಲಯದಲ್ಲಿ ವಿಶೇಷವಾಗಿ ಆಸಿಯಾನ್ ಸದಸ್ಯ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಭಾರತದ ಬದ್ಧತೆಯನ್ನು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಕೇತಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಮೋದಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ – ಆರ್‌ಸಿಇಪಿ ನಾಯಕರ ಸಭೆ ಹಾಗೂ ಆಸಿಯಾನ್ ವ್ಯಾಪಾರ ಮತ್ತು ಹೂಡಿಕೆ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತದ ಒಟ್ಟಾರೆ ವ್ಯಾಪಾರದಲ್ಲಿ ಶೇಕಡ ೧೦.೮೫ ರಷ್ಟು ಪಾಲು ಹೊಂದಿರುವ ಆಸಿಯಾನ್ ರಾಷ್ಟ್ರಗಳೊಂದಿಗೆ ವ್ಯಾಪಾರ ಬಾಂಧವ್ಯ ಮತ್ತಷ್ಟು ಹೆಚ್ಚಿಸಿ ನಿಕಟ ಸಹಕಾರ ವೃದ್ಧಿಸುವುದು ಪ್ರಧಾನಿ ಭೇಟಿಯ ಉದ್ದೇಶವಾಗಿದೆ.

ಪಿಲಿಫೈನ್ಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಸಹ ಪ್ರಧಾನಿ ಭೇಟಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ-ಐಆರ್‌ಆರ್‌ಐ ಹಾಗೂ ಮಹಾವೀರ್ ಪಿಲಿಫೈನ್ಸ್ ಫೌಂಡೇಷನ್‌ಗೂ ಭೇಟಿ ನೀಡಲಿದ್ದಾರೆ. ಈ ಸಂಸ್ಥೆಗಳು ಜಾಗತಿಕ ಆಹಾರ ಕೊರತೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಅತ್ಯುತ್ತಮ ಗುಣಮಟ್ಟದ ಭತ್ತದ ಬೀಜವನ್ನು ಅಭಿವೃದ್ಧಿಪಡಿಸುವ ಮೂಲಕ ಜಾಗತಿಕ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ.

ಬಹಳಷ್ಟು ಸಂಖ್ಯೆಯ ಭಾರತೀಯ ವಿಜ್ಞಾನಿಗಳು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಶೋಧನೆ ಹಾಗೂ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ವಾರಣಾಸಿಯಲ್ಲಿ ಐಆರ್‌ಆರ್‌ಐನ ದಕ್ಷಿಣ ಏಷ್ಯಾ  ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕೇಂದ್ರ ರೈತರ ಕೌಶಲ್ಯವನ್ನು ಹೆಚ್ಚಿಸುವುದರ ಜೊತೆಗೆ ಬೆಳೆ ವೈವಿಧ್ಯತೆ, ಮೌಲ್ಯವರ್ಧನೆ, ಉತ್ಪಾದನಾ ವೆಚ್ಚ ಇಳಿಕೆ, ಅಕ್ಕಿ ಉತ್ಪಾದನೆ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

ತಮ್ಮ ಪಿಲಿಫೈನ್ಸ್ ಭೇಟಿ ಆ ದೇಶದೊಂದಿಗಿನ ರಾಜಕೀಯ- ಭದ್ರತಾ, ಆರ್ಥಿಕ ಹಾಗೂ ಸಾಮಾಜಿಕ ಸಾಂಸ್ಕೃತಿಕ ಅಡಿಪಾಯವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ