ರೈತರ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಗುಜರಾತ್ ರಾಜ್ಯ ರಸಗೊಬ್ಬರ ನಿಗಮಕ್ಕೆ ಕೇಂದ್ರದಿಂದ ಅಮೊನಿಯಂ ಸಲ್ಫೆಟ್‌ಗೆ ಸಬ್ಸಿಡಿ ಬಿಡುಗಡೆ

ರೈತರ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಗುಜರಾತ್ ರಾಜ್ಯ ರಸಗೊಬ್ಬರ ನಿಗಮ- (ಜಿಎಸ್‌ಎಫ್‌ಸಿ) ಗೆ ಅಮ್ಮೋನಿಯಂ ಸಲ್ಫೆಟ್ ಸಬ್ಸಿಡಿ ಬಿಡುಗಡೆ ಮಾಡಿದೆ.

ಈ ಹಿಂದೆ ಕೆಲವು ಅವಧಿಯಲ್ಲಿ ರೈತರಿಗೆ ಅನುಕೂಲಗಳನ್ನು ಕಂಪನಿ ಒದಗಿಸದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ೨೦೦೩ರಿಂದ ಈವರೆಗೆಗೆ ಜಿಎಸ್‌ಎಫ್‌ಸಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸರ್ಕಾರ ತಡೆ ಹಿಡಿದಿತ್ತು.

ಆದರೀಗ ರಾಸಾಯನಿಕ ಮತ್ತು ರಸಗೊಬ್ಬರ  ಸಚಿವಾಲಯ ನಿನ್ನೆ ಜಿಎಸ್‌ಎಫ್‌ಸಿಗೆ ಸಬ್ಸಿಡಿ ಪುನರಾರಂಭಿಸಿರುವ ಕುರಿತು ನಿರ್ಧಾರ ಕೈಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿದೆ.

ಈ ನಡುವೆ ಕಾಂಗ್ರೆಸ್ ಶುಕ್ರವಾರ ಜಿಎಸ್‌ಎಫ್‌ಸಿಗೆ ಸಬ್ಸಿಡಿ ನೀಡಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಗುಜರಾತ್ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ ಜಿಎಸ್‌ಎಫ್‌ಸಿಗೆ ಸಬ್ಸಿಡಿ ಬಿಡುಗಡೆ ಮಾಡಿದೆ ಎಂದು ಹೇಳಿದೆ.

ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ನೀಡಲು ಉತ್ಪಾದನೆ ಮತ್ತು ಮಾರಾಟಕ್ಕಾಗಿ ಜಿಎಸ್‌ಎಪ್‌ಸಿ ಕಂಪನಿಗೆ ಕೇಂದ್ರ ಸುಮಾರು ೭೦ ಸಾವಿರ  ಕೋಟಿ ರೂಪಾಯಿ ವಾರ್ಷಿಕ ರಸಗೊಬ್ಬರ ಸಬ್ಸಿಡಿ ನೀಡಲಿದೆ.