ಅಮೆರಿಕದಲ್ಲಿ ನಡೆದ ನಾಕ್ಸ್‌ವಿಲ್ಲೆ ಚಾಲೆಂಜರ್ ಟೆನಿಸ್ ಪಂದ್ಯಾವಳಿಯ ಪರುಷರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಪುರವ್ ರಾಜಾ ಜೋಡಿಗೆ ಪ್ರಶಸ್ತಿ

ಪಾಕಿಸ್ತಾನ ಸರ್ಕಾರ ಎಲ್ಲ ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಪ್ರಧಾನಮಂತ್ರಿ ಶಹೀದ್ ಖಾಕ್ವಾನ್ ಅಬ್ಬಾಸಿ ಅಧಿಕಾರ ಸ್ವೀಕರಿಸಿದ ನಂತರ ಆಗಸ್ಟ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ದೇಶದಲ್ಲಿನ ಮಾರಕ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವುದಾಗಿ ತಿಳಿಸಿದ್ದರು.

ಸ್ವಯಂಚಾಲಿತ ಶಸ್ತ್ರಾಸ್ತ್ರ ಹೊಂದಿರುವ ಮಾಲೀಕರು ಅರೆ ಚಾಲಿತ ಶಸ್ತ್ರಾಸ್ತ್ರದೊಂದಿಗೆ ಬದಲಿಸಿಕೊಳ್ಳಬಹುದು ಅಥವಾ ಐವತ್ತು ಸಾವಿರ ರೂಪಾಯಿಗಳಿಗೆ ಅವುಗಳನ್ನು ಹಿಂದಿರುಗಿಸಬಹುದು ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಅಥವಾ ಬದಲಿಸಲು ಮುಂದಿನ ವರ್ಷದ ಜನವರಿ ೧೫ರವರೆಗೆ ಅವಕಾಶ ನೀಡಲಾಗಿದೆ.