ದೇಶದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ೨೦೧೯ರ ಮಾರ್ಚ್ ವೇಳೆಗೆ ಅತಿ ವೇಗದ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಭಾರತನೆಟ್‌ನ ಎರಡನೇ ಮತ್ತು ಅಂತಿಮ ಹಂತದ ಯೋಜನೆಗೆ ಇಂದು ಚಾಲನೆ

ದೇಶದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ೨೦೧೯ರ ಮಾರ್ಚ್ ವೇಳೆಗೆ ಅತಿ ವೇಗದ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಭಾರತನೆಟ್‌ನ ಎರಡನೇ ಮತ್ತು ಅಂತಿಮ ಹಂತದ ಯೋಜನೆಗೆ ಇಂದು ಚಾಲನೆ ದೊರೆಯಲಿದೆ. ೩೪ ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ಭಾರತ್‌ನೆಟ್ ಅನುಷ್ಠಾನಕ್ಕೆ ರಾಜ್ಯಗಳ ನಡುವಣ ಒಪ್ಪಂದಕ್ಕೆ ದೂರಸಂಪರ್ಕ ಇಲಾಖೆ ನವದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಿದೆ.

ಈ ಎರಡನೇ ಹಂತದಲ್ಲಿ ಉಳಿದ ಎಲ್ಲ ಒಂದೂವರೆ ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.

ಎಲ್ಲ ರಾಜ್ಯಗಳ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಮತ್ತು ಕಾರ್ಯದರ್ಶಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಭಾರತ್‌ನೆಟ್ ಯೋಜನೆಯ ಮೊದಲ ಹಂತದಲ್ಲಿ ಒಂದು ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್ ಜಾಲದ ಮೂಲಕ ಬ್ರಾಡ್‌ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.