ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ

ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ ಅಧಿಸೂಚನೆ ಇಂದು ಹೊರಡಿಸಲಾಗುವುದು.

ಇದೇ ತಿಂಗಳ ೨೧ ನಾಮಪತ್ರ ಸಲ್ಲಿಕೆಗೆ ಕಡೆಯದಿನವಾಗಿದ್ದು, ಮರುದಿನ ನಾಮಪತ್ರ ಪರಿಶೀಲನೆ ನಡೆಯಲಿದೆ. ೨೪ರಂದು ನಾಮಪತ್ರ ಹಿಂಪಡೆಯಬಹುದಾಗಿದೆ.

ಒಟ್ಟು ೧೮೨ ಕ್ಷೇತ್ರಗಳ ಪೈಕಿ ಡಿಸೆಂಬರ್ ೯ರಂದು ಮೊದಲ ಹಂತದ ಮತದಾನ ೮೯ ಕ್ಷೇತ್ರಗಳಲ್ಲಿ ನಡೆಯಲಿದೆ.  ಡಿಸೆಂಬರ್ ೧೪ಕ್ಕೆ ಉಳಿದ ೯೩ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ ೧೮ರಂದು ಮತಎಣಿಕೆ ಪ್ರಕ್ರಿಯೆ ನಡೆಯಲಿದೆ.

ಹಿಮಾಚಲ ಪ್ರದೇಶದಲ್ಲಿ ಒಂದೇ ಹಂತದಲ್ಲಿ ನಡೆದ ಚುನಾವಣೆಯ ಮತಎಣಿಕೆ ಕೂಡ ಡಿಸೆಂಬರ್ ೧೮ರಂದು ನಡೆಯಲಿದೆ.