ಕಠ್ಮಂಡುವಿನಲ್ಲಿ ಇಂದು ೧೦ನೇ ದಕ್ಷಿಣ ಏಷ್ಯಾ ಆರ್ಥಿಕ ಸಮಾವೇಶ ಆರಂಭ

ಕಠ್ಮಂಡುವಿನಲ್ಲಿ ೧೦ನೇ ದಕ್ಷಿಣ ಏಷ್ಯಾ ಆರ್ಥಿಕ ಶೃಂಗಸಭೆ ಇಂದು ಆರಂಭಗೊಳ್ಳಲಿದೆ. ಮೂರು ದಿನಗಳ ಶೃಂಗಸಭೆಯ ಮುಖ್ಯ ಉದ್ದೇಶ ದಕ್ಷಿಣ ಏಷ್ಯಾದ ಸಮಗ್ರ ಆರ್ಥಿಕತೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಚರ್ಚೆ ಮಾಡುವುದಾಗಿದೆ.

ನೇಪಾಳದ ರಾಷ್ಟ್ರೀಯ ಯೋಜನಾ ಸಮಿತಿ ಮತ್ತು ವಾಣಿಜ್ಯ ಸಚಿವಾಲಯ ಹಾಗೂ ದಕ್ಷಿಣ ಏಷ್ಯಾದ ವ್ಯಾಪಾರ, ಆರ್ಥಿಕತೆ ಮತ್ತು ಪರಿಸರ ಇಲಾಖೆ ಈ ಶೃಂಗಸಭೆಯನ್ನು ಆಯೋಜಿಸಿದೆ.

ನೇಪಾಳದ ರಾಷ್ಟ್ರೀಯ ಯೋಜನಾ ಸಮಿತಿಯ ಉಪಾಧ್ಯಕ್ಷ ಡಾ. ಸ್ವರ್ಣಿಂ ವಾಗ್ಲೆ ಮಾಧ್ಯಮದವರೊಂದಿಗೆ ಮಾತನಾಡಿ, ಈ ಶೃಂಗಸಭೆಯ ಧ್ಯೇಯ ದಕ್ಷಿಣ ಏಷ್ಯಾದ ಆರ್ಥಿಕ ಅಭಿವೃದ್ಧಿಯೇ ಆಗಿದೆ. ಸಚಿವರು, ಸಂಸದರು, ಮಾಜಿ ಸಂಸದರು, ರಾಯಭಾರಿಗಳು, ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಚಿಂತಕರು ಹಾಗೂ ಆರ್ಥಿಕ ತಜ್ಞರನ್ನು ಸೇರಿ ಒಟ್ಟು ೨೦೦ ಮಂದಿ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

೨೦೦೮ರಲ್ಲಿ ಮೊದಲ ಆರ್ಥಿಕ ಶೃಂಗಸಭೆ ಆರಂಭವಾಯಿತು. ಆರ್ಥಿಕತೆ ಮತ್ತು ಅಭಿವೃದ್ಧಿ ಕುರಿತಾದ ವಿಷಯಗಳು ಹಾಗೂ ಸವಾಲುಗಳನ್ನು ಎದುರಿಸುವ ಕುರಿತಾಗಿ ಉತ್ತಮ ಪರಿಹಾರವನ್ನು ಸಮಗ್ರವಾಗಿ ಎಲ್ಲರ ಸಹಕಾರದೊಂದಿಗೆ ಕಂಡು ಹುಡುಕುವ ಪ್ರಯತ್ನವನ್ನು ಈ ಶೃಂಗಸಭೆಯಲ್ಲಿ ನಡೆಸಲಾಗುತ್ತಿದೆ ಎಂದರು.