ಭಾರತ – ಅಸಿಯಾನ್ ಸಂಬಂಧ ಬಲಿಷ್ಠ

ಬರಹ: ದಿಪಂಜನ್ ರಾಯ್ ಚೌಧುರಿ, ರಾಜತಾಂತ್ರಿಕ ಪತ್ರಕರ್ತ

ಭಾರತದ ಅಸಿಯಾನ್ ಮತ್ತು ಇಂಡೋ ಫೆಸಿಫಿಕ್ ಪ್ರದೇಶದ ಸಂಬಂಧಕ್ಕೆ ಇದೀಗ ಮತ್ತಷ್ಟು ಹುರುಪು ಬಂದಿದೆ. ೨೦೧೪ರ ನವೆಂಬರ್ ನಲ್ಲಿ ಮಾಯಾನ್ಮಾರ್ ನಲ್ಲಿ ನಡೆದ ೯ ನೇಪೂರ್ವ ಏಷ್ಯಾ ಸಮಾವೇಶ ಮತ್ತು ೧೨ನೇ ಅಸಿಯಾನ್ – ಭಾರತ ಸಮಾವೇಶದಲ್ಲಿ ಇದಕ್ಕೆ ಚಾಲನೆ ಸಿಕ್ಕಿತ್ತು. ಇದು ಪ್ರಧಾನಿಯವರ ಇಂತಹ‌ ನಾಲ್ಕನೇ ಪ್ರಯತ್ನ.

ಮನೀಲಾದಲ್ಲಿ ನಡೆದ ೧೫ನೇ ಅಸಿಯಾನ್ – ಭಾರತ ಸಮಾವೇಶದಲ್ಲಿ ಮೋದಿ ಮತ್ತು ಅಸಿಯಾನ್ ದೇಶಗಳ ನಾಯಕರು ಭಾರತ ಮತ್ತು ಅಸಿಯಾನ್ ದೇಶಗಳ ಸಂಬಂಧದ ೨೫ನೇವರ್ಷಾಚರಣೆಯನ್ನು ಆಚರಿಸಲು ಕೈಗೊಳ್ಳಬಹುದಾದ ವಿವಿಧ ಚಟುವಟಿಕೆಗಳ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.

ಭಾರತ ಮತ್ತು ಅಸಿಯಾನ್ ಮಧ್ಯೆ ೩೦ ಸಮಾಲೋಚನಾ ಪ್ರಕ್ರಿಯೆಗಳಿದ್ದು ಇದು ನಿರಂತರವಾಗಿ ಭೇಟಿ ಆಗುತ್ತಲೆ ಇರುತ್ತದೆ. ಇದರಲ್ಲಿ ಒಂದು ಸಮಾವೇಶ ಮತ್ತು ವಿದೇಶಾಂಗವ್ಯವಹಾರಗಳು, ವಾಣಿಜ್ಯ, ಪ್ರವಾಸೋದ್ಯಮ, ಕೃಷಿ, ಪರಿಸರ, ನವೀಕರಿಸಬಹುದಾದ ಇಂಧನ ಮತ್ತು ಟೆಲಿ ಕಮ್ಯುನಿಕೇಷನ್ ಸೇರಿದಂತೆ ೭ ಸಚಿವಾಲಯಗಳ ಬಗ್ಗೆ ಸಚಿವಾಲಯಮಟ್ಟದ ಸಭೆ ನಡೆಯುತ್ತಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಕೆ ಸಿಂಗ್,  ಅಸಿಯಾನ್ – ಭಾರತ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯನ್ನು ಮತ್ತು ಇಎಎಸ್ವಿದೇಶಾಂಗ ಸಚಿವರ ಸಭೆ ಫಿಲಿಫೈನ್ಸ್ ನ ಮನಿಲಾದಲ್ಲಿ ೨೦೧೭ ರ ಆಗಸ್ಟ್ ನಡೆದ ಸಂದರ್ಭದಲ್ಲಿ ಭಾಗವಹಿಸಿದರು. ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಸುರೇಶ್ ಪ್ರಭು ಸೆಪ್ಟೆಂಬರ್ನಲ್ಲಿ ನಡೆದ ಅಸಿಯಾನ್ ನ ಆರ್ಥಿಕ ಸಚಿವರ ಸಭೆಯಲ್ಲಿ ಭಾಗವಹಿಸಿ ಆರ್ಥಿಕ ಸಹಕಾರದ ವೃದ್ಧಿಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ನಾಲ್ಕನೇ ಅಸಿಯಾನ್ ರಕ್ಷಣಾ ಸಚಿವರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದು ಮನಿಲಾದಲ್ಲಿ ಕಳೆದತಿಂಗಳು ನಡೆದಿತ್ತು. ಭಯೋತ್ಪಾದನೆ ಬಗ್ಗೆಗಿನ ಭಾರತದ ಶೂನ್ಯ ಸಹಿಷ್ಣುತೆಯನ್ನು ಸೀತಾರಾಮನ್ ಪುನರುಚ್ಚರಿಸಿದ್ದಾರೆ.

೨೦೧೬-೧೭ ರ ಭಾರತ ಮತ್ತು ಅಸಿಯಾನ್ ವ್ಯಾಪಾರವು ೭೧ ಬಿಲಿಯನ್ ಅಮೆರಿಕನ್ ಡಾಲರ್ ಮತ್ತು ಭಾರತ ವಿಶ್ವದ ವ್ಯಾಪಾರದ ಶೇ. ೧೦.೮೫ ರಷ್ಟುನ್ನು ಈ‌ ಭಾಗದೊಂದಿಗೆಯೇನಡೆಸುತ್ತಿದೆ‌.

ಫಿಲಿಫೈನ್ಸ್ ನ ಭೇಟಿಯೊಂದಿಗೆ ಭಾರತದ ಸರ್ವೋಚ್ಚ ನಾಯಕರುಗಳಾದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಕಳೆದ ಮೂರು ವರ್ಷಗಳಲ್ಲಿ ಅಸಿಯಾನ್ ಎಲ್ಲ 10ದೇಶಗಳಿಗೆ ಭೇಟಿ ನೀಡಿದಂತಾಗಿದೆ. ಇದು ಅಸಿಯಾನ್ ದೇಶಗಳೊಂದಿಗಿನ ಸಂಬಂಧಕ್ಕೆ ಭಾರತ ಕೊಡುವ ಮಹತ್ವವನ್ನು ಹೇಳುತ್ತದೆ. ಇದು ಅಸಿಯಾನ್ ದೇಶಗಳೊಂದಿಗೆಸಂಬಂಧವನ್ನು ಬಲಿಷ್ಠಗೊಳಿಸಲು ಭಾರತ ಹೊಂದಿರುವ ಹಂಬಲದ ಪ್ರತೀಕ. ಭಾರತ ಈ ಭಾಗದ ಬಗ್ಗೆ ತೋರಿದ ನಿರ್ಲಕ್ಷ್ಯದಿಂದಾಗಿ ಚೀನಾದ ಪ್ರಭಾವ ಈ ಭಾಗದಲ್ಲಿ ಹೆಚ್ಚಾಗಿತ್ತು. ಆದರೆಈಗ ಭಾರತವು ಅಸಿಯಾನ್ ಬಗ್ಗೆ ಧನಾತ್ಮಕ ನಿಲುವು ಹೊಂದಿದೆ.

ಭಾರತ – ಅಸಿಯಾನ್ ಸಮಾಲೋಚನಾ ಭಾಗೀದಾರಿಕೆಗೆ 25 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಭಾರತದದ ಪ್ರಧಾನ ಮಂತ್ರಿಗಳ ಭೇಟಿ ನಡೆದಿದೆ. 15 ವರ್ಷಗಳ ಸಮಾವೇಶಮಟ್ಟದ ಭಾಗೀದಾರಿಕೆ ಮತ್ತು 5 ವರ್ಷಗಳ ವ್ಯೂಹಾತ್ಮಕ ಜೊತೆಗಾರಿಕೆಯನ್ನು ಭಾರತ ಅಸಿಯಾನ್ ದೇಶದೊಂದಿಗೆ ಹೊಂದಿದೆ. ಅಸಿಯಾನ್ ಸಮಾವೇಶದ ನೇಪಥ್ಯದಲ್ಲಿ ಫಿಲಿಫೈನ್ಸ್ ನಅಧ್ಯಕ್ಷ, ಅಸಿಯಾನ್ ನ ಪ್ರಸಕ್ತ ಮುಖ್ಯಸ್ಥ ಡುಟೆರೆ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮೋದಿ ಅವರು ಯುಎಸ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ಮತ್ತು ಜಪಾನಿನ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದರು.

ಭಾರತ ಸೇರಿ ಏಶಿಯಾನ್ ಪ್ರದೇಶವು 1.85 ಶತಕೋಟಿ ಜನಸಂಖ್ಯೆಯನ್ನು ಹೊಂದಿದೆ. ಜಾಗತಿಕ ಜನಸಂಖ್ಯೆಯ ನಾಲ್ಕನೇ ಒಂದು ಭಾಗ ಮತ್ತು ಒಟ್ಟು 3.8ಟ್ರಿಲಿಯನ್ ಡಾಲರ್ ಗಳ ಜಿಡಿಪಿಯನ್ನು ಹೊಂದಿದೆ; ವಿಶ್ವದಲ್ಲೇ ಅತಿ ದೊಡ್ಡ ಆರ್ಥಿಕ ಪ್ರದೇಶಗಳಲ್ಲಿ ಇದು ಒಂದಾಗಿದೆ. ಕಳೆದ 17 ವರ್ಷಗಳಲ್ಲಿ ಅಸಿಯಾನ್ಹೂಡಿಕೆಯು 70 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದು ನಮ್ಮ ಒಟ್ಟಾರೆ ಎಫ್ಡಿಐಯ 17% ಕ್ಕಿಂತಲೂ ಹೆಚ್ಚು ಮತ್ತು ಅಸಿಯಾನ್ ನಲ್ಲಿನ ಭಾರತೀಯ ಹೂಡಿಕೆಯ ಈಸಂದರ್ಭದಲ್ಲಿ 40 ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಹೆಚ್ಚಿತ್ತು.

ಇಂಡೋ-ಏಷಿಯಾನ್ ದ್ವಿಪಕ್ಷೀಯ ವ್ಯಾಪಾರ ಮತ್ತು ಬಂಡವಾಳವು ದೃಢವಾಗಿಯೇ ಉಳಿದಿದ್ದು ಇನ್ನಷ್ಟು ವಿಸ್ತರಣೆಗೆ ಅವಕಾಶವಿದೆ. ಭಾರತೀಯ ಆರ್ಥಿಕತೆಯ ಚೈತನ್ಯ ಮತ್ತು ಎಲ್ಲಾಏಷಿಯಾನ್ ರಾಷ್ಟ್ರಗಳ ಆರ್ಥಿಕತೆ ಅನೇಕ ಪೂರಕ ಅಂಶಗಳನ್ನು ಹೊಂದಿದ್ದು ಅಸಿಯಾನ್ ದೇಶಗಳೊಂದಿಗೆ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಇನ್ನಷ್ಟು ಅವಕಾಶವಿದೆ.

ಭಾರತ ಮತ್ತು ಫಿಲಿಫೈನ್ಸ್ ಉತ್ತಮ ಆಡಳಿತ, ಅಂತರ್ಗತ ಬೆಳವಣಿಗೆ, ಮೂಲಭೂತ ಸೌಕರ್ಯ ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರೀಕೃತವಾಗಿವೆ. ಎರಡೂ ದೇಶಗಳೂವಿಶ್ವದ ಅನೇಕ ಬೆಳವಣಿಗೆಗಳ ಬಗ್ಗೆ ಒಮ್ಮತದ ಅಭಿಪ್ರಾಯ ಹೊಂದಿವೆ. ಆದ್ದರಿಂದ ದ್ವಿಪಕ್ಷೀಯ ಸಂಬಂಧವನ್ನು ಬಲಿಷ್ಠಗೊಳಿಸಲು ಸಾಕಷ್ಟು ಸಾಧ್ಯತೆಗಳು ಉಭಯ ದೇಶಗಳ ಮುಂದಿವೆ.

ಭಾರತವು ಅಸಿಯಾನ್ ನ ಏಕತೆ ಮತ್ತು ಪ್ರಾದೇಶಿಕ ಭದ್ರತಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಅಸಿಯಾನ್ ಏಕತೆ, ಅದರಲ್ಲಿಯೂ ಕಾಂಬೋಡಿಯಾ, ಲಾವೋಸ್, ಮಾಯಾನ್ಮಾರ್ ಮತ್ತುವಿಯೆಟ್ನಾಂಗಳಲ್ಲಿ ಅನೇಕ ಸಾಮರ್ಥ್ಯ ವೃದ್ಧಿ ಕ್ರಮಗಳನ್ನು ಭಾರತ ಕೈಗೊಂಡಿದೆ. ಭಾರತವು ಹಣಕಾಸು ಯೋಜನೆಗಳಿಗೆ ಮೂರು ನಿಧಿಗಳನ್ನು ಹೊಂದಿದ್ದು 100 ದಶಲಕ್ಷ ಅಮೆರಿಕನ್ಡಾಲರ್ ಸಂಚಿತ ನಿಧಿಯನ್ನು ಹೊಂದಿರುವ ಭಾರತ – ಅಸಿಯಾನ್ ಸಹಕಾರ ನಿಧಿ, ಅಸಿಯಾನ್-ಭಾರತ ಹಸಿರು ನಿಧಿ ಮತ್ತು ಅಸಿಯಾನ್-ಭಾರತ ವಿಜ್ಞಾನ ಮತ್ತು ಪ್ರಾದೇಶಿಕ ನಿಧಿಯನ್ನುಹೊಂದಿದೆ.

ಭೌತಿಕ, ಡಿಜಿಟಲ್ ಮತ್ತು ಆರ್ಥಿಕ ಸಂಪರ್ಕವನ್ನು ಹೆಚ್ಚಿಸುವುದು ಭಾರತ ಮತ್ತು ಅಸಿಯಾನ್ ದೇಶಗಳ ಸಂಬಂಧ ಮುಖ್ಯ ಗುರಿಯಾಗಿದೆ. ಭಾರತದ ಬಗ್ಗೆ ಈ ಪ್ರದೇಶದಲ್ಲಿಸದಾಭಿಪ್ರಾಯವಿದೆ. ಇದು ರಾಜಕೀಯ – ಭದ್ರತೆ, ಸಮಾಜೋ – ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರದಲ್ಲಿ ಅಸಿಯಾನ್ ನೊಂದಿಗೆ ಇನ್ನಷ್ಟು ಬಲಾಢ್ಯಗೊಳ್ಳಲಿದೆ.