ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕ್ವಾಜಿಗುಡ್‌ನಲ್ಲಿ ಉಗ್ರರು ಮತ್ತು ಸೇನಾಯೋಧರ ನಡುವೆ ಗುಂಡಿನ ಚಕಮಕಿ ; ಮೂವರು ಉಗ್ರರ ಹತ್ಯೆ, ಓರ್ವ ಜೀವಂತ ಸೆರೆ.

ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕಾಜಿಗುಡ ಬಳಿ ಭದ್ರತಾಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.

ಭದ್ರತಾಪಡೆಯ ಮೂಲಗಳು ಆಕಾಶವಾಣಿಗೆ ಈ ವಿಷಯ ತಿಳಿಸಿದ್ದು, ಕಾಜಿಗುಡ ಬಳಿ ಸೇನಾ ಬೆಂಗಾವಲು ಪಡೆ ಶ್ರೀನಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಉಗ್ರರು ನಿನ್ನೆ ಗುಂಡಿನ ದಾಳಿ ನಡೆಸಿದ್ದರು.

ನಂತರ ಈ ಪ್ರದೇಶವನ್ನು ಸುತ್ತುವರೆದ ಭದ್ರತಾಪಡೆ, ಉಗ್ರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಮೃತಪಟ್ಟಿದ್ದು, ಗಾಯಗೊಂಡಿದ್ದ ಮತ್ತೋರ್ವ ಉಗ್ರನನ್ನು ಬಂಧಿಸಲಾಗಿದೆ.