ದೇಶದ ಹಲವೆಡೆ ಉಂಟಾಗಿರುವ ಓಖಿ ಚಂಡಮಾರುತದ ಪರಿಸ್ಥಿತಿಯ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ ; ಪ್ರಧಾನಮಂತ್ರಿ ನರೇಂದ್ರ ಮೋದಿ.

ದೇಶದ ಕೆಲವು ಭಾಗಗಳಲ್ಲಿ ಓಖಿ ಚಂಡಮಾರುತದ ಪರಿಣಾಮದ ಬಗ್ಗೆ  ತಾವು ನಿರಂತರ ನಿಗಾ ವಹಿಸಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಚಂಡಮಾರುತದ ಪರಿಣಾಮಗಳನ್ನು ಎದುರಿಸುವ ಕುರಿತಂತೆ ಸಂಬಂಧ ಪಟ್ಟ ಪ್ರಾಧಿಕಾರಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.

ತೊಂದರೆಗಿಡಾಗಿರುವವರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಪ್ರಧಾನ ಮಂತ್ರಿಯವರು ವಾಗ್ದಾನ ನೀಡಿದ್ದಾರೆ.

ಈ ಮಧ್ಯೆ ಚಂಡಮಾರುತದಿಂದಾಗಿ ಗುಜರಾತ್‌ನಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಗುಜರಾತ್‌ನ ಕಾರ್ಯಕರ್ತರು ಜನರಿಗೆ ಸಹಾಯ ಹಸ್ತ ಚಾಚಲು ಮುಂದಾಗಬೇಕು ಎಂದು ಪ್ರಧಾನ ಮಂತ್ರಿಯವರು ಸರಣಿ ಟ್ವೀಟ್‌ಗಳಲ್ಲಿ ಮನವಿ ಮಾಡಿದ್ದಾರೆ.