ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ೨೦೧೭-೧೮ನೇ ಸಾಲಿನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ.

೨೦೧೭ – ೧೮ನೇ ಸಾಲಿನ ಐದನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಪ್ರಕಟಿಸಲಿದೆ.

ಆರ್.ಬಿ.ಐ ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದ ಹಣಕಾಸು ನೀತಿ ಸಮಿತಿ ಎರಡು ದಿನಗಳ ಹಣಕಾಸು ಪರಿಸ್ಥಿತಿಯ ಪರಾಮರ್ಶೆಯನ್ನು ನಿನ್ನೆಯಿಂದ ಆರಂಭಿಸಿದೆ. ಹಣದುಬ್ಬರ ನಿಯಂತ್ರಿಸಲು ಆರ್.ಬಿ.ಐ ಬಡ್ಡಿ ದರಗಳನ್ನು ಕಡಿಮೆ ಮಾಡುವ ಸಾಧ್ಯತೆಗಳಿಲ್ಲ ಎಂದು ಹಲವು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್‌ನಲ್ಲಿ ಪ್ರಕಟಿಸಲಾದ ಆರ್ಥಿಕ ನೀತಿ ಸಂದರ್ಭದಲ್ಲೂ ಸಹ ಬಡ್ಡಿ ದರಗಳಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಿರಲಿಲ್ಲ.