ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ.

ಗುವಾಹಟಿಯಲ್ಲಿ ನಡೆಯುತ್ತಿರುವ  ದಕ್ಷಿಣ ಏಷ್ಯಾ ಪ್ರಾದೇಶಿಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ನೇಪಾಳದ ವಿರುದ್ಧ  ನಡೆದ  ಪಂದ್ಯದಲ್ಲಿ ಭಾರತ ೩-೦ ಅಂತರದಿಂದ ಗೆಲುವು ಸಾಧಿಸಿತು.ಈ ಟೂರ್ನಿಯುದ್ದಕ್ಕೂ ಭಾರತ ಗೆಲುವಿನ  ಅಭಿಯಾನ ಮುಂದುವರೆಸುತ್ತಲೇ ಬಂದಿತ್ತು.

ಬಾಲಕರ ಮೊದಲ ಸಿಂಗಲ್ಸ್‌ನಲ್ಲಿ ಆರ್ಯಮಾನ್ ಟಂಡನ್ ಡ್ರಾ ಸಾಧಿಸಿದ್ದರು.

ಬಾಲಕರ ಡಬಲ್ಸ್‌ನಲ್ಲಿ ಹರಿನ್‌ತಾಪ್ ದಾಸ್ ಗುಪ್ತ ಹಾಗೂ ಕೃಷ್ಣ ಪ್ರಸಾದ್ ಜೋಡಿ  ಫೈನಲ್ ನಲ್ಲಿ ದೀಪೇಶ್ ಧಾಮಿ ಹಾಗೂ ನಬೀನ್ ಶ್ರೇಷ್ಠ ವಿರುದ್ಧ ಗೆಲುವು ಸಾಧಿಸಿದರು.

ಇದೀಗ ತಂಡ ಚಾಂಪಿಯನ್‌ಷಿಪ್ ಮುಕ್ತಾಯವಾಗಿದ್ದು, ವೈಯಕ್ತಿಕ  ಸ್ಪರ್ಧೆ ಇಂದಿನಿಂದ ಪ್ರಾರಂಭಗೊಳ್ಳಲಿದೆ.