ಮುಖ್ಯ ದರಗಳನ್ನು ಬದಲಾಯಿಸದ ಆರ್ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಅದರ ಐದನೇ ದ್ವೈಮಾಸಿಕ ಪಾಲಿಸಿ ಸ್ಟೇಟ್ ಮೆಟ್ ಅನ್ನು ಬಿಡುಗಡೆ ಮಾಡಿದೆ. ಸಮಿತಿಯು ರಿಸರ್ವ್ ಬ್ಯಾಂಕ್ ಗವರ್ನರ್ ಡಾ.ಉರ್ಜಿತ್ ಪಟೇಲ್ ಅವರ ನೇತೃತ್ವವನ್ನು ಹೊಂದಿದೆ.  ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಲು ನಿರ್ಧರಿಸಿರುವುದು ಆಸಕ್ತಿದಾಯಕ ನಡೆಯಾಗಿದೆ. ಎಂಪಿಸಿ ರೆಪೋ ದರವನ್ನು ಶೇಕಡಾ 6 ಮತ್ತು ರಿವರ್ಸ್ ರೆಪೋ ದರದಲ್ಲಿ ಶೇ 5.75 ಕ್ಕೆಯೇ ನಿಗದಿ ಪಡಿಸಿದೆ. ಆದರೆ ಪ್ರಸ್ತುತ ಹಣಕಾಸು ವರ್ಷದಲ್ಲಿ 4.3-4.7 ರಷ್ಟು ಹಣದುಬ್ಬರ ಮುನ್ಸೂಚನೆಯನ್ನು ಇದು ಹೆಚ್ಚಿಸಿದೆ.
ಆರ್ಬಿಐ ಕಾಯ್ದೆ 1934 ರ ತಿದ್ದುಪಡಿ ಹಿನ್ನೆಲೆಯಲ್ಲಿ ಭಾರತದ ಹಣಕಾಸು ನೀತಿ ಸಮಿತಿಯು ಆರ್ಬಿಐ ಗವರ್ನರ್ ಒಬ್ಬರೇ ಪಾಲಿಸಿ ದರಗಳನ್ನು ನಿರ್ಧರಿಸುವ ಬದಲು ಎಂಪಿಸಿ ಸದಸ್ಯರ ಶಾಸನಬದ್ಧ ಮತ್ತು ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿದೆ. ಮ್ಯಾಕ್ರೋ ಪಾಲಿಸಿ ರಚನೆಯಲ್ಲಿನ ಸುಧಾರಣೆಯ ಪ್ರಮುಖ ಭಾಗವಾಗಿ “ಎನ್ಎಂಎಫ್” (“ನ್ಯೂ ಮಾನಿಟರಿ ಫ್ರೇಮ್ ವರ್ಕ್”) ಗೆ ಅನ್ವಯವಾಗುವಂತೆ ಆರ್ಬಿಐ ಮತ್ತು ಭಾರತ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ. ಈ ಸಾಂಸ್ಥಿಕ ಸುಧಾರಣೆಯ ನಂತರ, ಆರ್ಬಿಐ ಏಕೈಕ ಉದ್ದೇಶವೆಂದರೆ ಬೆಲೆ ಸ್ಥಿರತೆ ನಿರ್ವಹಿಸುವುದು. ಅಲ್ಲಿಂದೀಚೆಗೆ, ವಿನಿಮಯ ದರ, ಉದ್ಯೋಗ ಮತ್ತು ಹಣದುಬ್ಬರ ಜೊತೆಗೆ ಬೆಳವಣಿಗೆಯನ್ನು ನಿರ್ವಹಿಸುವ ಬಹು ಸೂಚಕ ವಿಧಾನವನ್ನು ಅನುಸರಿಸುವುದನ್ನು ಆರ್ಬಿಐ ಸ್ಥಗಿತಗೊಳಿಸಿದೆ.  ಕೇವಲ ಹಣದುಬ್ಬರ ಗುರಿಗಳ ಕಡೆಗೆ ತನ್ನ ಗಮನ ಕೇಂದ್ರಿಕರಿಸುತ್ತಿದೆ.
ತಟಸ್ಥ ಹಣಕಾಸು ನೀತಿ ನಿಲುವನ್ನು ಶೇಕಡಾ 6 ಕ್ಕೆ ಇಳಿಸಲು ಎಂಪಿಸಿ ನಿರ್ಧಾರವು ಕಾರಣವಾಗಿದ್ದು, ಹಣದುಬ್ಬರವು 4% ನಷ್ಟು ಆಧಾರದ ಮೇಲೆ ದೃಢವಾಗಿ ನಿಯಂತ್ರಣದಲ್ಲಿದೆ ಮತ್ತು ಆರ್ಥಿಕ ಬೆಳವಣಿಗೆಯು ಮತ್ತೆ ಹಳಿಗೆ ಮರಳಿದೆ. ಜಿಎಸ್ಟಿ, ಬ್ಯಾಂಕ್ ಮರುಪರಿಶೀಲನೆ ಪ್ಯಾಕೇಜ್ ಮತ್ತು ವ್ಯವಹಾರದ ಸರಳೀಕರಣ ಶ್ರೆಯಾಂಕ ಸೇರಿದಂತೆ ಸರ್ಕಾರದ ವಿವಿಧ ಸುಧಾರಣಾ ಕ್ರಮಗಳ ಹಿನ್ನೆಲೆಯಲ್ಲಿ ಎಂಪಿಸಿ ವಾರ್ಷಿಕ ಜಿ.ವಿ.ಎ (ಒಟ್ಟು ಮೌಲ್ಯವರ್ಧಿತ) ಮುನ್ಸೂಚನೆ – 6.7 ಶೇಕಡಾ ೨೦೧೮ರ ಹಣಕಾಸು ವರ್ಷದ ಮುನ್ಸೂಚನೆಯನ್ನು ಉಳಿಸಿಕೊಂಡಿದೆ. 2017-18 ರ ಐದನೆಯ ದ್ವಿ-ಮಾಸಿಕ ಹಣಕಾಸು ನೀತಿ ಹೇಳಿಕೆಯ ಪ್ರಕಾರ, ಆರ್ಬಿಐ ಅಕ್ಟೋಬರ್ ನಲ್ಲ 2017-18ರ 6.7 ಶೇಕಡಾ ನೈಜ ಜಿ.ವಿ.ಎ ಬೆಳವಣಿಗೆಯ ಪ್ರಕ್ಷೇಪಣೆಯನ್ನು ಉಳಿಸಿಕೊಂಡಿದೆ. ಇದು ಇತ್ತೀಚಿನ ಬೆಳವಣಿಗೆಯನ್ನು, ಜಾಗತಿಕ ತೈಲ ಬೆಲೆಗಳನ್ನು ಲೆಕ್ಕಿಸದೆಯೇ ಸಮತೋಲನಗೊಳಿಸಿದೆ. 5 ನೇ ದ್ವಿ-ಮಾಸಿಕ ಹಣಕಾಸು ನೀತಿ ಹೇಳಿಕೆಗಳಲ್ಲಿ, ಜಿಎಸ್ಟಿ ದರಗಳ ಇಳಿಕೆ, ಪರೋಕ್ಷ ತೆರಿಗೆ ಆದಾಯದಲ್ಲಿ 28% ರಿಂದ ಶೇ 18 ರವರೆಗೆ  ಇಳಿಕೆಯಾಗಿರುವುದು, ಅಬಕಾರಿ ಸುಂಕದ ಭಾಗಶಃ ಹಿಂತೆಗೆತ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ‌ ವ್ಯಾಟ್ ಮತ್ತು ಕೆಲವು ರಾಜ್ಯಗಳಲ್ಲಿನ ಕೃಷಿ ಸಾಲದ ಮನ್ನಾ “ಹಣಕಾಸು ಇಳಿಜಾರಿಗೆ” ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ.
 
ಬಡ್ಡಿದರದ ಕಾರಣ ಮುಂದುವರಿದ ದೇಶಗಳಿಗೆ ಬಂಡವಾಳ “ಹಾರುವುದನ್ನು” ತಪ್ಪಿಸಲು ಬಡ್ಡಿ ದರದಲ್ಲಿ ಯಥಾ ಸ್ಥಿತಿ ಇಟ್ಟುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾಗತಿಕ ಹಣಕಾಸಿನ ಮಾರುಕಟ್ಟೆಗಳಲ್ಲಿ ಅದರಲ್ಲಿಯೂ ಯು.ಎಸ್.ನ ಬಾಂಡ್ ಇಳುವರಿಗಳಲ್ಲಿನ ಪ್ರವೃತ್ತಿಗಳ ಬೆಳವಣಿಗೆಯ ಬಗ್ಗೆ ಎಂಪಿಸಿ ವರದಿ ಗಮನಿಸಿದೆ.
 
ತಟಸ್ಥ ದರ ನಿರ್ಧಾರ ಕೈಗೊಂಡಿರುವ ಆರ್ಬಿಐ ನಿರ್ಧಾರದ ಮೇಲೆ ಕೆಲವರು ನಿರಾಶೆ ವ್ಯಕ್ತಪಡಿಸಿದ್ದಾರೆ. ದರಗಳನ್ನು ಕಡಿಮೆ ಮಾಡುವುದು ದೇಶೀಯ ಬೇಡಿಕೆ ಪುನಶ್ಚೇತನ ಮತ್ತು ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಖಾಸಗಿ ಹೂಡಿಕೆ ಪ್ರೋತ್ಸಾಹಿಸಲು ಗಮನಾರ್ಹ ಎಂದು ನಿರಾಶೆ ವ್ಯಕ್ತಪಡಿಸಿದವರ ಅಭಿಪ್ರಾಯ.
ನೀತಿ (ರೆಪೋ) ದರವನ್ನು ತಗ್ಗಿಸಲು ಬ್ಯಾಂಕುಗಳು ತಮ್ಮ ಠೇವಣಿ ಅಥವಾ ಸಾಲ ದರಗಳನ್ನು ತಿರುಗಿಸಲು ಅಸಂಭವವೆಂದು ಸಾಕ್ಷಿ ತೋರಿಸುತ್ತದೆ. ನೀತಿ ಪ್ರಕಟಣೆಯ ಲಾಭಗಳು ಭಾರತೀಯ ಆರ್ಥಿಕತೆಯ “ಬಡ್ಡಿದರದ ಚಾನಲ್” ಕಾರ್ಯವಿಧಾನಗಳ ಪರಿಣಾಮವನ್ನು ಅವಲಂಬಿಸಿವೆ. ರೆಪೋ ದರವನ್ನು “ಪರ್ ಸೆ” ಕಡಿಮೆ ಮಾಡುವುದರಿಂದ ಆರ್ಥಿಕ ಬೆಳವಣಿಗೆಯನ್ನು ಪ್ರಚೋದಿಸುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಆದ್ದರಿಂದ ಆರ್ಬಿಐ ಗವರ್ನರ್ ಡಾ.ಉರ್ಜಿತ್ ಪಟೇಲ್ ಅವರ ದರವನ್ನು ಬದಲಿಸದೆ ಇಟ್ಟುಕೊಳ್ಳುವುದು ಎಚ್ಚರಿಕೆಯ ನಿರ್ಧಾರವಾಗಿತ್ತು. ಆಹಾರ ಮತ್ತು ಇಂಧನ ಬೆಲೆಗಳು ಮತ್ತು ಹಣದುಬ್ಬರ ನಿರೀಕ್ಷೆಗಳ ಮೇಲಿನ ಅದರ ಪ್ರಭಾವ ಮತ್ತು ಜೀವಿತಾವಧಿಯ ವೆಚ್ಚವನ್ನು ವಿಕಸನ ಮಾಡುವಿಕೆಯಿಂದಾಗಿ ಸರಬರಾಜು-ಪಕ್ಕದ ಒತ್ತಡಗಳು ದರವನ್ನು ಯಥಾಸ್ಥಿತಿಯಲ್ಲಿ ಇಡಲು ಪ್ರಮುಖ ಕಾರಣವಾಗಿದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.
ಕಾರ್ಪೋರೇಟ್ ಪ್ರಪಂಚದ ಭಾವನೆಗಳಿಗೆ ಸ್ಪಂದಿಸಿ ಅವುಗಳ ನಿರೀಕ್ಷಿತ ಮಾರ್ಗದಲ್ಲೇ ಎಂಪಿಸಿ ನೀತಿ ನಿರ್ಧಾರವು ಇದೆ. ಈ ವರ್ಗ ಸಕಾರಾತ್ಮಕತೆಯೊಂದಿಗೆ ಸುದ್ದಿ ಸ್ವೀಕರಿಸಿದ್ದಾರೆ. ಜಾಗತಿಕ ಹಣಕಾಸಿನ ಮಾರುಕಟ್ಟೆಗಳಲ್ಲಿ ಪ್ರಧಾನ ಹಣದುಬ್ಬರ ಕ್ರಿಯಾಶೀಲತೆ ಮತ್ತು ಪ್ರವೃತ್ತಿಯಿಂದ ಬಂದ ಒತ್ತಡಗಳು, ಯುಎಸ್ ಫೆಡರಲ್ ಬ್ಯಾಂಕ್‌ ನ  (ಫೆಡ್) ಅಧ್ಯಕ್ಷರಾದ ಜಾನೆಟ್ ಯೆಲೆನ್ ಅವರ ನಿರ್ಧಾರಗಳು, ದರವನ್ನು ಕಾಯ್ದುಕೊಳ್ಳಲು ಆರ್ಬಿಐ ನಿರ್ಧಾರವನ್ನು ನಿಯಂತ್ರಿಸಿವೆ. ಜಾನೆಟ್ ಯೆಲೆನ್, ನವೆಂಬರ್ ಅಂತ್ಯದಲ್ಲಿ ಬಿಡುಗಡೆಯಾದ ಫೆಡ್ ನಿರ್ಧಾರಗಳಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಫೆಡ್ ಬಡ್ಡಿದರಗಳನ್ನು ಹೆಚ್ಚಿಸುವ ಸುಳಿವುಗಳನ್ನು ನೀಡಿದರು, ಇದರಿಂದಾಗಿ ಉದಯೋನ್ಮುಖ ಆರ್ಥಿಕತೆಗಳ ಬಂಡವಾಳದ ಹರಿವುಗಳಿಗೆ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ಆರ್ಬಿಐ ತನ್ನ ತಟಸ್ಥ ಸ್ಥಿತಿಯ ದರವನ್ನು ಉಳಿಸಿಕೊಳ್ಳುವುದು ಅನಿವಾರ್ಯ ವಾಗಿತ್ತು. ಇದು ಒಟ್ಟಾರೆ ಸಾಲದ ಬೆಳವಣಿಗೆ ಮತ್ತು ಖಾಸಗಿ ಬಂಡವಾಳವನ್ನು ಪ್ರಚೋದಿಸುತ್ತದೆಂದು ನಿರೀಕ್ಷಿಸಲಾಗಿದೆ.
ಬರಹ: ಡಾ. ಲೇಖಾ ಎಸ್ ಚಕ್ರವರ್ತಿ, ಅಸೋಸಿಯೆಟ್ ಪ್ರೋಫೆಸರ್, ಸಾರ್ವಜನಿಕ ಹಣ ಮತ್ತು ಸಾರ್ವಜನಿಕ ಪಾಲಿಸಿಗಳ ರಾಷ್ಟ್ರೀಯ ಸಂಸ್ಥೆ