ವಿಶ್ವ ಹಾಕಿ ಲೀಗ್ ಫೈನಲ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ ಭಾರತ; ಭುವನೇಶ್ವರದಲ್ಲಿ ನಡೆದ ಪಂದ್ಯದ ಪೆನಾಲ್ಟಿ ಶೂಟೌಟ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬೆಲ್ಜಿಯಂ ವಿರುದ್ಧ ೩-೨ ಗೋಲುಗಳಿಂದ ಜಯ

ಭಾರತ, ವಿಶ್ವ ಹಾಕಿ ಲೀಗ್ ಫೈನಲ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದೆ. ಕಳೆದ ರಾತ್ರಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಪೆನಾಲ್ಟಿ ಶೂಟೌಟ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬೆಲ್ಜಿಯಂ ವಿರುದ್ಧ ೩-೨ ಗೋಲುಗಳಿಂದ ಜಯಗಳಿಸಿದೆ.

ಪಂದ್ಯದಲ್ಲಿ ಉಭಯ ತಂಡಗಳು ೩-೩ ಗೋಲು ಗಳಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಅವಕಾಶ ನೀಡಲಾಯಿತು. ಬಿ ಗುಂಪಿನಲ್ಲಿ ಭಾರತ ಪುರುಷರ ಹಾಕಿ ತಂಡ ಲೀಗ್ ಹಂತವನ್ನು ದಾಟಿದೆ. ಭಾರತ ೨ ಪಂದ್ಯಗಳನ್ನು ಸೋತು, ೩ ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡು ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ. ಮತ್ತೊಂದೆಡೆ ಬೆಲ್ಜಿಯಂ ಎ ಗುಂಪಿನಲ್ಲಿ ೩ ಜಯ ಸಾಧಿಸಿ ಅಗ್ರಸ್ಥಾನದಲ್ಲಿದೆ. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ, ಸ್ಪೇನ್ ವಿರುದ್ಧ ೪-೧ ಗೋಲುಗಳ ಜಯ ಸಾಧಿಸಿದೆ.

ಭಾರತ ಸೆಮಿಫೈನಲ್‌ನಲ್ಲಿ ಯಾವ ತಂಡದ ವಿರುದ್ಧ ಸೆಣಸಬೇಕಿದೆ ಎಂಬುದು ಇಂದು ನಡೆಯಲಿರುವ ೨ ಕ್ವಾರ್ಟರ್ ಫೈನಲ್ ಪಂದ್ಯಗಳ ಫಲಿತಾಂಶದಿಂದ ನಿರ್ಧಾರವಾಗಲಿದೆ.

ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಇಂಗ್ಲೆಂಡ್-ಅರ್ಜಿಂಟೀನಾ, ಜರ್ಮನಿ-ನೆದರ್‌ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗಲಿವೆ.