ದೇಶದ ಒಟ್ಟಾರೆ ೧೩೦ ಕೋಟಿ ಜನಸಂಖ್ಯೆಯನ್ನು ಒಳಗೊಂಡಂತೆ ನಡೆಯಲಿರುವ ೨೦೨೧ರ ಜನಗಣತಿ ಕಾರ‍್ಯ ಈ ವರ್ಷದಿಂದ ಆರಂಭ- ಕೇಂದ್ರ ಗೃಹ ಸಚಿವಾಲಯ ಹೇಳಿಕೆ

ದೇಶದ ಒಟ್ಟಾರೆ ೧೩೦ ಕೋಟಿ ಜನಸಂಖ್ಯೆಯನ್ನು ಒಳಗೊಂಡಂತೆ ನಡೆಯಲಿರುವ ೨೦೨೧ರ ಜನಗಣತಿ ಕಾರ‍್ಯ ಈ ವರ್ಷದಿಂದ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ೨೦೨೧ರ ಜನಗಣತಿ ಕಾರ‍್ಯದ ಮಾರ್ಗಸೂಚಿ ಕುರಿತು ಚರ್ಚೆ ನಡೆಸಲಾಯಿತು. ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ೨೦೨೧ರ ಜನಗಣತಿ ಕಾರ‍್ಯ ಈ ವರ್ಷದಿಂದ ಆರಂಭವಾಗಲಿದ್ದು, ಅದರ ಕಾರ‍್ಯ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದೆ. ಆಯ್ದ ರಾಜ್ಯಗಳಲ್ಲಿ ಕೈಗೊಳ್ಳಲಿರುವ ಪ್ರಾಯೋಗಿಕ ಗಣತಿ ಕಾರ‍್ಯ, ಸಂಬಂಧಿಸಿದವರ ಸಭೆ ನಡೆಸುವುದು ಮತ್ತು ಗಣತಿ ವಿನ್ಯಾಸ ಮತ್ತು ಚೌಕಟ್ಟು ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಹಿಂದಿನ ಜನಗಣತಿ ಕಾರ‍್ಯ ೨೦೧೧ರಲ್ಲಿ ನಡೆದಿತ್ತು. ಕೇಂದ್ರ ಗೃಹ ಕಾರ‍್ಯದರ್ಶಿ ರಾಜೀವ್ ಗೌಬಾ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.