ಹಸ್ತಾಂತರ ಪ್ರಕರಣದ ವಿಚಾರಣೆ ಎದುರಿಸಲು ಅಬಕಾರಿ ಉದ್ಯಮಿ ವಿಜಯ್ ಮಲ್ಯ ಇಂದು ಬ್ರಿಟನ್ನಿನ ನ್ಯಾಯಾಲಯದ ಮುಂದೆ ಹಾಜರು

ಹಸ್ತಾಂತರ ಪ್ರಕರಣದ ವಿಚಾರಣೆಯನ್ನು ಎದುರಿಸಲು ಅಬಕಾರಿ ಉದ್ಯಮಿ ವಿಜಯ್ ಮಲ್ಯ ಇಂದು ಬ್ರಿಟನ್ನಿನ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಸುಮಾರು ೯ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಹಣ ದುರ್ಬಳಕೆ ಹಾಗೂ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಆತನನ್ನು ಹಸ್ತಾಂತರಿಸುವಂತೆ ಭಾರತ ಕೋರಿದೆ. ೬೨ ವರ್ಷದ ಮಲ್ಯ ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಅಂತಿಮ ವಿಚಾರಣೆಗಾಗಿ ಹಾಜರಾಗಲಿದ್ದಾರೆ. ಭಾರತದ ಪರವಾಗಿ ಬ್ರಿಟನ್ನಿನ ಕ್ರೌನ್ ಪ್ರಾಸೀಕ್ಯೂಷನ್ ಸೇವೆ -ಸಿಪಿಎಸ್ ವಾದ ಮಂಡಿಸಲಿದೆ.