‘ನೆರೆ ರಾಷ್ಟ್ರ ಪ್ರಥಮ’ ನೀತಿಯಡಿ ಮಾಲ್ಡೀವ್ಸ್ ಜೊತೆ ಪೂರ್ಣ ಸಾಮರ್ಥ್ಯದ ಬಾಂಧವ್ಯ ಬಲಪಡಿಸಲು ಬದ್ಧ – ಭಾರತ ಹೇಳಿಕೆ.

‘ನೆರೆ ರಾಷ್ಟ್ರ ಪ್ರಥಮ’ ನೀತಿಯಡಿ ಮಾಲ್ಡೀವ್ಸ್ ಜೊತೆ ಪೂರ್ಣ ಸಾಮರ್ಥ್ಯದ ಬಾಂಧವ್ಯ ಬಲಪಡಿಸಲು ಬದ್ಧ ಎಂದು ಭಾರತ ತಿಳಿಸಿದೆ.
ದೆಹಲಿಯಲ್ಲಿ ನಿನ್ನೆ ಮಾಲ್ಡೀವ್ಸ್ ರಾಷ್ಟ್ರಾಧ್ಯಕ್ಷರ ವಿಶೇಷ ಪ್ರತಿನಿಧಿ ಮತ್ತು ವಿದೇಶಾಂಗ ಸಚಿವ ಡಾ. ಮೊಹಮ್ಮದ್ ಅಸೀಮ್ ಅವರನ್ನು ಭೇಟಿಯಾದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಕ್ಷಣೆ ಮತ್ತು ಭದ್ರತೆ ಸೇರಿದಂತೆ ವಿವಿಧ ವಲಯಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದರು.
ನಂತರ, ಮೊಹಮ್ಮದ್ ಅಸೀಮ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಮಾಲ್ಡೀವ್ಸ್‌ನ ಭಾರತ ಪ್ರಥಮ ನೀತಿಯಡಿ ಭಾರತದೊಂದಿಗೆ ಉತ್ತಮ ಬಾಂಧವ್ಯ ಮುಂದುವರೆಸಲು ತಮ್ಮ ಸರ್ಕಾರ ಬದ್ಧ ಎಂದು ಅವರು ತಿಳಿಸಿದರು. ಮಾಲ್ಡೀವ್ಸ್‌ನ ಅಭಿವೃದ್ಧಿ ಮತ್ತು ಭದ್ರತೆ ನಿಟ್ಟಿನಲ್ಲಿ ಎಲ್ಲ ಸಹಕಾರ ಮುಂದುವರೆಸುವುದಾಗಿ ಪ್ರಧಾನಿ ಹೇಳಿದರು.