ಭಾರತ ಮತ್ತು ಚೀನಾ ಸೇನೆಗಳ ನಡುವೆ ಶೀಘ್ರವೇ ಹಾಟ್‌ಲೈನ್ ಸ್ಥಾಪನೆ – ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ.

ಭಾರತ ಮತ್ತು ಚೀನಾ ಸೇನೆಗಳ ನಡುವೆ ಶೀಘ್ರವೇ ಹಾಟ್‌ಲೈನ್ ಸ್ಥಾಪಿಸಲಾಗುವುದು ಎಂದು ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಚೀನಾ ಸದ್ಯದಲ್ಲೇ ಭಾರತೀಯ ಸೇನೆಯ ಮಿಲಿಟರಿ ಕಾರ‍್ಯಾಚರಣೆಗಳ ಸೇನಾ ನಿರ್ದೇಶಕರು ಮತ್ತು ಅದೇ ಬಗೆಯ ಚೀನಾದ ಅಧಿಕಾರಿಗಳ ನಡುವೆ ಹಾಟ್‌ಲೈನ್ ಹೊಂದಲಾಗುವುದು ಎಂದರು.

ಗಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಬಗೆಹರಿಸಿಕೊಳ್ಳಲು ಇದು ನೆರವಾಗಲಿದೆ ಎಂದು ಅವರು ಹೇಳಿದರು. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಡಿಜಿಎಂಒಗಳ ನಡುವೆ ಹಾಟ್‌ಲೈನ್ ಸಂಪರ್ಕವಿದೆ.