ಸೆಂಚುರಿಯನ್‌ನ ಸೂಪರ್ ಸ್ಫೋರ್ಟ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ೨ನೇ ಟೆಸ್ಟ್ ಕ್ರಿಕೆಟ್ ಇಂದಿನಿಂದ ಆರಂಭ.

ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ  ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂದಿನಿಂದ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಪಂದ್ಯ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗುವುದು.

ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಒಂದು ಪಂದ್ಯ ಗೆದ್ದು ಮುನ್ನಡೆ ಸಾಧಿಸಿದೆ. ಆಕಾಶವಾಣಿ ಪಂದ್ಯದ ವೀಕ್ಷಕ ವಿವರಣೆಯನ್ನು ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಪ್ರಸಾರ ಮಾಡಲಿದೆ.

ಶ್ರೋತೃಗಳು ರಾಜಧಾನಿ. ಎಫ್ ಎಂ ಗೋಲ್ಡ್ ಮತ್ತು ಹೆಚ್ಚುವರಿ ತರಂಗಾಂತರದಲ್ಲೂ ನೇರ ಪ್ರಸಾರ ಆಲಿಸಬಹುದಾಗಿದೆ.