೨೦೧೫ರಲ್ಲಿ ಚಂಡೇಲ್‌ನಲ್ಲಿ ಸೇನೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ -ಪ್ರಮುಖ ಆರೋಪಿ ನೊರೇಮ್ ಪ್ರೇಮ್ ಕಾಂತ ಸಿಂಗ್ ಬಂಧನ.

೨೦೧೫ರಲ್ಲಿ ಚಂಡೇಲ್‌ನಲ್ಲಿ ಸೇನೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ – ಎನ್ ಐ ಎ ಪ್ರಮುಖ ಆರೋಪಿ ನೊರೇಮ್ ಪ್ರೇಮ್ ಕಾಂತ ಸಿಂಗ್‌ನನ್ನು ಬಂಧಿಸಿದೆ.

೨೦೧೫ರ ಜೂನ್‌ನಲ್ಲಿ ಮಣಿಪುರ್‌ನ ಚಂಡೇಲ್ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ೮ ಯೋಧರು ಹತ್ಯೆಗೀಡಾಗಿದ್ದರು. ಆ ಘಟನೆ ನಂತರ ಆರೋಪಿ ತಲೆ ಮರೆಸಿಕೊಂಡಿದ್ದ.

ಮಣಿಪುರ ಪೊಲೀಸರು ಮತ್ತು ತನಿಖಾ ಸಂಸ್ಥೆ  ಜಂಟಿಯಾಗಿ ನೊರೇಮ್ ಸಿಂಗ್‌ನನ್ನು ಬಂಧಿಸಿದೆ. ಆತ ನಿಷೇಧಿತ ಉಗ್ರಗಾಮಿ ಸಂಘಟನೆ ಕಂಗ್ಲೈ ಯವೂಲ್ ಕನಾ ಲುಪ್‌ಗೆ ಸೇರಿದವರು ಎನ್ನಲಾಗಿದೆ.

ಆತನಿಂದ ಒಂದು ಪಿಸ್ತೂಲು ೫ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.