ಕ್ರಿಕೆಟ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂದು ಪೋರ್ಟ್ ಎಲಿಜಬೆತ್‌ನಲ್ಲಿ ೫ನೇ ಏಕದಿನ ಪಂದ್ಯ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ೫ನೇ  ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ಇಂದು  ಪೋರ್ಟ್ ಎಲಿಜಬೆತ್‌ನಲ್ಲಿ ಇಂದು ನಡೆಯಲಿದೆ. ಈ ಪಂದ್ಯವು ಸಂಜೆ ೪.೩೦ಕ್ಕೆ ಆರಂಭಗೊಳ್ಳಲಿದೆ.

ಆಕಾಶವಾಣಿಯು  ಎಫ್ ಎಮ್ ವಾಹಿನಿ ಹಾಗೂ ರಾಜಧಾನಿ ಚಾನೆಲ್‌ನಲ್ಲಿ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆಯನ್ನು ಸಂಜೆ   ೪ ಗಂಟೆಯಿಂದ ನೇರ  ಪ್ರಸಾರ ಮಾಡಲಿದೆ.   ೬ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ೩-೧ ಅಂತರದ ಮುನ್ನಡೆ ಸಾಧಿಸಿದೆ.

ಭಾರತ ಡರ್ಬನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ  ೬ ವಿಕೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದರೆ,  ಸೆಂಚೂರಿಯನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ೯ ವಿಕೆಟ್‌ಗಳ ಅಂತರದಲ್ಲಿ ಗೆಲುವು ಪಡೆದಿತ್ತು. ಕೇಪ್‌ಟೌನ್‌ನಲ್ಲಿ ನಡೆದ ೩ನೇ ಏಕದಿನ ಪಂದ್ಯದಲ್ಲಿ ೧೨೪ ರನ್‌ಗಳ ಅಂತರದಲ್ಲಿ ವಿಜಯ ಸಾಧಿಸಿದರೆ, ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ೪ನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ  ೫ ವಿಕೆಟ್‌ಗಳ ಅಂತರದ ಜಯ ಸಾಧಿಸಿತು.