ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿ ಕುರಿತು ಉನ್ನತ ಅಧಿಕಾರಿಗಳ ಜತೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ನವದೆಹಲಿಯಲ್ಲಿ ಚರ್ಚೆ

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು  ನಿನ್ನೆ ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲಿಸಿದರು. ನವದೆಹಲಿಯಲ್ಲಿ  ಉನ್ನತಾಧಿಕಾರಿಗಳೊಂದಿಗೆ ನಿನ್ನೆ ನಡೆದ ಸಭೆಯಲ್ಲಿ ಅವರು, ಜಮ್ಮು ಕಾಶ್ಮೀರದ  ಸೇನಾ ಶಿಬಿರದ ಮೇಲೆ  ನಡೆದ ದಾಳಿ,  ಹಾಗೂ  ಶ್ರೀನಗರದಲ್ಲಿ ಭಯೋತ್ಪಾದಕರು ಮತ್ತು  ಭದ್ರತಾ ಪಡೆಗಳ ನಡುವೆ  ನಡೆದ ಗುಂಡಿನ ಕಾಳಗದ ಬಗ್ಗೆ ವಿವರ ಮಾಹಿತಿ ಪಡೆದರು.

ಜಮ್ಮು – ಕಾಶ್ಮೀರದೆಲ್ಲೆಡೆ ಹೆಚ್ಚಿನ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುವುದಲ್ಲದೇ, ಶಾಂತಿ ಕದಡುವ ಉಗ್ರರ ಪ್ರಯತ್ನವನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗುವುದು ಎಂದರು. ಅಂತೆಯೇ ರಾಜ್ಯದ ಗಡಿಯುದ್ದಕ್ಕೂ  ಉಗ್ರರ ಒಳನುಸುಳುವಿಕೆ ತಡೆಯಲು ಕ್ರಮ ಕೈಗೊಳ್ಳವಂತೆ  ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ  ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ  ಹಾಗೂ ಗುಪ್ತಚರ ದಳದ ಮಹಾಪ್ರಧಾನ ನಿರ್ದೇಶಕ ರಾಜೀವ್ ಜೈನ್ ಪಾಲ್ಗೊಂಡಿದ್ದರು.